ಹೊಸತೇನಿದೆ

ಸಾರ್ವಜನಿಕ ಪ್ರಕಟಣೆಗೆ

ಕೋವಿಡ್ ನಿಂದ ಆರ್ಥಿಕ ತೊಂದರೆ ಅನುಭವಿಸುತ್ತಿರುವ ಕರ್ನಾಟಕದ

ಅಲ್ಪಸಂಖ್ಯಾತ ಮಹಿಳೆಯರಿಗೆ

ಮೈಕ್ರೋ ಸಾಲ ಯೋಜನೆ(ವೈಯಕ್ತಿಕ)1

(2020-21 ನೇ ಸಾಲಿಗೆ ಮಾತ್ರ)

                                                          

ಕೋವಿಡ್-19 ರ ಪಿಡುಗಿನಿಂದಾಗಿ ತೊಂದರೆಗೊಳಗಾದ, ನಿಗಮದ ಯಾವುದೇ ಯೋಜನೆಯಲ್ಲೂ ಇದುವರೆಗೆ ಸಾಲ, ಸಹಾಯಧನ ಯಾವುದನ್ನೂ ಪಡೆಯದ ಕಡುಬಡತನದಲ್ಲಿರುವ ಅಲ್ಪಸಂಖ್ಯಾತ ಸಮುದಾಯz 23,000 ಅಂತ್ಯೋದಯ/ಬಿಪಿಎಲ್ ಕಾರ್ಡ್ ಹೊಂದಿರುವ 25 ರಿಂದ 50  ವಯೋಮಾನದೊಳಗಿನ ಮಹಿಳೆಯರಿಗೆ, ತಳ್ಳುವ ಗಾಡಿಯಲ್ಲಿ  ವ್ಯಾಪಾರ, ಬೀದಿ ವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರ,  ಕಿರಾಣಿ ಅಂಗಡಿ,ಅರಿಷಿನ/ ಕುಂಕುಮ/ ಅಗರಬತ್ತಿ/ಕರ್ಪೂರ, ಪಾದಚಾರಿ ಮಾರ್ಗದಲ್ಲಿ, ಟೀ/ಕಾಪಿ ಮಾರಾಟ, ಎಳನೀರು ವ್ಯಾಪಾರ,  ಹೂವಿನ ವ್ಯಾಪಾರ, ತರಕಾರಿ ವ್ಯಾಪಾರ, ಹಣ್ಣಿನ ವ್ಯಾಪಾರ, ಇನ್ನಿತರ ಸಣ್ಣ ವ್ಯಾಪಾರ ನಡೆಸಲು ಆರಂಭಿಕ ಬಂಡವಾಳಕ್ಕಾಗಿ ರೂ.10,000/-ಮೊತ್ತದ( ರೂ.8000/- ಸಾಲ +ರೂ.2,000/- ಸಬ್ಸಿಡಿ) ಅಲ್ಪಾವಧಿ ಸಾಲ ಯೋಜನೆ ಇದು.

ಸಾಲ ನೀಡಿಕೆ ವಿಧಾನ:

ಮೊದಲ ಹಂತ:

 

 1. ನಿಗಮದ ವೆಬ್ ಸೈಟಿನಲ್ಲಿ(kmdcmicro.karnataka.gov.in) ಹೆಸರು,ವಿಳಾಸ,ಆಧಾರ್ ಸಂಖ್ಯೆ,ಮೊಬೈಲ್ ಸಂಖ್ಯೆ ಇತ್ಯಾದಿ ಪ್ರಾಥಮಿಕ ವಿವರಗಳನ್ನು ನೀಡಿ ಅಪ್ ಲೋಡ್ ಮಾಡಿದಾಗ ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಓಟಿಪಿ ಸಂಖ್ಯೆಯೊಂದು ಬರುತ್ತದೆ. ಅದನ್ನು ಆನ್ ಲೈನಿನಲ್ಲಿ ದಾಖಲಿಸಿದಾಗ ಅರ್ಜಿಯು ನಿಗಮದ ವೆಬ್ ಸೈಟಿನಲ್ಲಿ ರಿಜಿಸ್ಟರ್ ಆಗುತ್ತದೆ. ಆಗ ಅರ್ಜಿದಾರರ ರಿಜಿಸ್ಟರ್ ಸಂಖ್ಯೆ ಮೊಬೈಲಿಗೂ ರವಾನೆಯಾಗುತ್ತದೆ . ನಂತರ ಪುನ: ರಿಜಿಸ್ಟರ್ ನಂಬರ್ ಮೂಲಕ ವೆಬ್ ಸೈಟಿಗೆ ಲಾಗಿನ್ ಆಗಿ,ಬ್ಯಾಂಕ್ ಖಾತೆ,ಆದಾಯ/ಜಾತಿ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳ ಸ್ಕಾನ್ ಕಾಪಿಯನ್ನು ಅಪ್ ಲೋಡ್ ಮಾಡಬೇಕು. ಸಾಲದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಆನ್ ಲೈನಿನಲ್ಲೇ ಭರ್ತಿ ಮಾಡಿ,ಸಂಬಂಧಪಟ್ಟದಾಖಲಾತಿಗಳೊಂದಿಗೆ ಅಪ್ ಲೋಡ್ ಮಾಡಿದ ನಂತರ ಸ್ವೀಕೃತಗೊಂಡ ನಿಮ್ಮ ಆನ್ ಲೈನ್ ಅರ್ಜಿಯ ಎರಡು ಪ್ರತಿಗಳನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳಬೇಕು.

 ಅ). ಅರ್ಜಿಸಲ್ಲಿಸುವಾಗ ನೀಡಬೇಕಾದ ದಾಖಲಾತಿಗಳು

        1.ಸರಳ ಅರ್ಜಿ ನಮೂನೆ (ಆನ್ ಲೈನಿನಲ್ಲೆ ನೀಡಲಾಗಿದೆ)

        2.ಆಧಾರ್ ಕಾರ್ಡ್ ಪ್ರತಿ

        3.ಬಿಪಿಎಲ್ ಕಾರ್ಡ್/ಅಂತ್ಯೋದಯ ಕಾರ್ಡ್ ಪ್ರತಿ

        4.ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ

          (ಹೆಸರು,ಖಾತೆ ಸಂಖ್ಯೆ,ಫೋಟೋ,ಬ್ಯಾಂಕಿನ ವ್ಯವಸ್ಥಾಪಕರ ಸಹಿ ಇರುವ ಪುಟ

            ಮತ್ತು  ಇತ್ತೀಚಿನ ಎರಡು ತಿಂಗಳ ವ್ಯವಹಾರ,ಶಿಲ್ಕು ತೋರಿಸುವ ಪುಟಗಳ

             ಜೆರಾಕ್ಸ್)

        5.ಜಾತಿ/ಆದಾಯ ಪ್ರಮಾಣ ಪತ್ರ

 1. ವಿಧವೆಯರು: ಪಿಂಚಣಿ ದಾಖಲೆ ಅಥವಾ ಗಂಡನ ಮರಣ ಪ್ರಮಾಣ ಪತ್ರ
 2. ವಿಕಲ ಚೇತನರು: ಅಧಿಕೃತ ಅಂಗವೈಕಲ್ಯ ಪ್ರಮಾಣ ಪತ್ರ.

                                                         

ಆ).ಅರ್ಜಿ ಸಲ್ಲಿಕೆ ಮತ್ತು ಮಂಜೂರಾತಿ ಪ್ರಕ್ರಿಯೆ:

 

 1. ಆನ್ ಲೈನ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು,ನಿಗಮವು ನಿರ್ಧರಿಸಿದ ಮಾನದಂಡಗಳ ಆಧಾರದಲ್ಲಿ,ಆನ್ ಲೈನಿನಲ್ಲಿಯೇ ಜಿಲ್ಲಾವಾರು, ತಾಲೂಕು ವಾರು ಮತ್ತು ಗ್ರಾಮಪಂಚಾಯತುವಾರಾಗಿ ಹಂಚಿಕೆಯಾದ ಗುರಿಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗುವುದು.

 ಎರಡನೇ ಹಂತ: 

 

 1. ಹೀಗೆ ಆಯ್ಕೆಯಾದ ಫಲಾನುಭವಿಗಳಿಗೆ ಮೊಬೈಲ್ ಮೂಲಕ ಆಯ್ಕೆಯಾಗಿರುವ ಬಗ್ಗೆ ಸಂದೇಶ ಕಳುಹಿಸಲಾಗುತ್ತದೆ. ಫಲಾನುಭವಿಗಳು ಈಗಾಗಲೇ ತಮಗೆ ನೀಡಿದ ರಿಜಿಸ್ಟರ್ ನಂಬರ್ ಮೂಲಕ ಲಾಗಿನ್ ಆಗಿ ಆನ್ ಲೈನಿನಿಂದ ಸಾಲದ ದಾಖಲೆ ಪತ್ರಗಳನ್ನು ಮಾತ್ರ ಡೌನ್ ಲೋಡ್ ಮಾಡಿಕೊಂಡು,ಭರ್ತಿ ಮಾಡಿ ಸಹಿ ಹಾಕಿದ ದಾಖಲೆ ಪತ್ರಗಳನ್ನು ಸ್ಕಾನ್ ಮಾಡಿ ಮತ್ತೆ ಅಪಲೋಡ್ ಮಾಡಬೇಕು.
 2. ಆನ್ ಲೈನಿನಲ್ಲಿ ಅಪಲೋಡ್ ಮಾಡಿದ ನಂತರ, ಸಹಿ ಹಾಕಿಟ್ಟುಕೊಂಡ .ಸಾಲ ಮಂಜೂರಾತಿ ಪತ್ರ ಹಾಗೂ ತಗಾದೆಪತ್ರ,ಹಿಂದೆ ಸಲ್ಲಿಸಿದ ಸಾಲದ ಅರ್ಜಿ ಮತ್ತು ನೀಡಿರುವ ಕೆವೈಸಿ ದಾಖಲೆಗಳ ಪ್ರತಿಗಳೊಂದಿಗೆ, ಆಯಾ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಸಲ್ಲಿಸಬೇಕು.

 

ಮೂರನೇ ಹಂತ:

 

 1. ಆಯಾ ಜಿಲ್ಲೆಯಿಂದ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಕಛೇರಿಗಳಿಗೆ ಮುಂಚಿತವಾಗಿ ಮೇಲ್ ಮೂಲಕ ಕಳುಹಿಸಲಾಗುವುದು. ತದನಂತರ ಆಯ್ಕೆಯಾದ ಫಲಾನುಭವಿಗಳು ಸಲ್ಲಿಸುವ ಅರ್ಜಿ, ಸಹಿ ಹಾಕಿಟ್ಟುಕೊಂಡ .ಸಾಲ ಮಂಜೂರಾತಿ ಪತ್ರ ಹಾಗೂ ತಗಾದೆಪತ್ರ,ಗಳ ಮೂಲಪ್ರತಿಗಳನ್ನು ಮತ್ತು ಕೆವೈಸಿ ದಾಖಲೆಗಳನ್ನು ಆಯಾ ಜಿಲ್ಲಾ ವ್ಯವಸ್ಥಾಪಕರು ಮೂಲ ದಾಖಲೆಗಳೊಂದಿಗೆ ಪರಿಶೀಲಿಸಿ ಸ್ವೀಕೃತಿಯ ಗುರುತಾಗಿ ಫಲಾನುಭವಿಗಳ 2ನೇ ಪ್ರತಿಯಲ್ಲಿ ಸೀಲು ಹಾಕಿ ಕೊಡುತ್ತಾರೆ. ಈ ಸ್ವೀಕೃತಿ ಪತ್ರವನ್ನು ಫಲಾನುಭವಿಗಳು ತಮ್ಮೊಂದಿಗೆ ಇಟ್ಟುಕೊಳ್ಳಬೇಕು.

 

 1. ಸಾಲ ಅನುಮೋದನೆಯ ನಂತರ ಕೇಂದ್ರ ಕಛೇರಿಯಿಂದ ಕೂಡಲೇ ಸಾಲದ ಮೊತ್ತವನ್ನು ನೆಫ್ಟ್ ಮೂಲಕ ಪ್ರತಿಯೋರ್ವ ಆಯ್ಕೆಯಾದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು

 ಸಾಲಬಿಡುಗಡೆಯ ನಂತರ:

 ಮೈಕ್ರೋ ಸಾಲದ ಮೊರೆಟೋರಿಯಂ ಅವಧಿ 2 ತಿಂಗಳು ಮಾತ್ರ.

 ಸಬ್ಸಿಡಿ ಮೊತ್ತ ರೂ.2000/- ಬಿಟ್ಟು, ರೂ.8000/- ಸಾಲದ ಮೊತ್ತವನ್ನು

 ಶೇಕಡ 4ರ ಬಡ್ಡಿಯೊಂದಿಗೆ 10 ಸಮಾನ ಮಾಸಿಕ ಕಂತುಗಳಲ್ಲಿ, ರೂ.820/-ರಂತೇ

 ಮರುಪಾವತಿ ಮಾಡತಕ್ಕದ್ದು.

 

ಕೋವಿಡ್-19 ರ ಪಿಡುಗಿನಿಂದಾಗಿ ತೊಂದರೆಗೊಳಗಾದ, ನಿಗಮದ ಯಾವುದೇ ಯೋಜನೆಯಲ್ಲೂ ಇದುವರೆಗೆ ಸಾಲ, ಸಹಾಯಧನ ಯಾವುದನ್ನೂ ಪಡೆಯದ ಕಡುಬಡತನದಲ್ಲಿರುವ ವಿಧವೆಯರು, ವಿಕಲಚೇತನರನ್ನೂ ಒಳಗೊಂಡಂತೇ,  ಅಲ್ಪಸಂಖ್ಯಾತ ಸಮುದಾಯz ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

 

11-11-2020                                                                                                                      -ವ್ಯವಸ್ಥಾಪಕ ನಿರ್ದೇಶಕರು

 

 ಯೋಜನೆಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

 

 

.

Last Updated : 07-12-2020 12:10 PM
Modified By : Karnataka Minorities Development Corporation


ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 10675
 • ಇತ್ತೀಚಿನ ನವೀಕರಣ :27-06-2020 10:34 AM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ