ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಕರ್ನಾಟಕ ಸರ್ಕಾರ

Back
ವ್ಯಾಪಾರ-ಉದ್ದಿಮೆ ನೇರ ಸಾಲ ಯೋಜನೆ

ವ್ಯಾಪಾರ/ಉದ್ದಿಮೆ ನೇರ ಸಾಲ ಯೋಜನೆ:

ಈ ಯೋಜನೆಯಡಿಯಲ್ಲಿ ವ್ಯಾಪಾರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಸಾಲವನ್ನು ಒದಗಿಸಲಾಗುವುದು

ಅರ್ಹತೆಗಳು:

  1. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
  2. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು
  3. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು
  4. ಅರ್ಜಿದಾರರು ಕೆ.ಎಂ.ಡಿ.ಸಿ. ಗೆ ಸುಸ್ತಿದಾರರಾಗಿರಬಾರದು.
  5. ನಿಗಮಕ್ಕೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಮಾತ್ರ ಸಾಲವನ್ನು ಒದಗಿಸಲಾಗುತ್ತದೆ. ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆಯಿರಬಾರದು
  6. ವ್ಯಾಪಾರ ಉದ್ದಿಮೆ ಸಾಲವನ್ನು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಲಾಗುವುದು.
  7. ಕುಟುಂಬದ ವಾರ್ಷಿಕ ಆದಾಯ ರೂ00 ಲಕ್ಷಗಳಿಗಿಂತ ಕಡಿಮೆ ಇರುವ ಅರ್ಜಿದಾರರಿಗೆ ರೂ 20.00 ಲಕ್ಷವರೆಗೆ ಶೇ 4 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು
  8. ಕುಟುಂಬದ ವಾರ್ಷಿಕ ಆದಾಯ ರೂ00 ದಿಂದ 15.00 ಲಕ್ಷವರೆಗೆ ಇರುವ ಅರ್ಜಿದಾರರಿಗೆ ರೂ 20.00 ಲಕ್ಷವರೆಗೆ ಶೇ 6 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು

ದಾಖಲೆಗಳು:

1.ಆಧಾರ್‌ ಕಾರ್ಡ್‌ ಪ್ರತಿ (ನಿವಾಸದ ಪುರಾವೆ)
2.ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
3.ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
4.ಆಸ್ತಿಯ ಗುತ್ತಿಗೆ ಪತ್ರ/ವಿಭಜನಾ ಪತ್ರ/ಬಿಡುಗಡೆ ಪತ್ರ/ಗಿಫ್ಟ್ ಡೀಡ್/ಬಾಡಿಗೆ ಒಪ್ಪಂದ/ಮಾರಾಟ ಪತ್ರ
5.ಸಿಎ(ಚಾರ್ಟರ್ಡ್‌ ಅಕೌಂಟೆಂಟ್) ವತಿಯಿಂದ ದೃಢೀಕರಿಸಿದ ಯೋಜನಾ ವರದಿ/ಚಟುವಟಿಕೆಗಳ ವಿವರ
6.ಯೋಜನೆಗೆ ಸಂಬಂಧಿಸಿದ ದರಪಟ್ಟಿಗಳು
7.ಅಡಮಾನ ಮಾಡುವ ಸ್ವತ್ತಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳಿಂದ ಪಡೆದ ಪರವಾನಿಗೆ ಪತ್ರ
8.ಕಟ್ಟಡದ ಖಾತಾ ಎಕ್ಸಟ್ರಾಕ್ಟ್‌ ಮತ್ತು ಖಾತಾ ಪ್ರಮಾಣ ಪತ್ರ ಅಥವಾ ಭೂಮಿಯ ಹಕ್ಕು ಬದಲಾವಣೆ ಪ್ರತಿ
9.ಕಂದಾಯ ಜಮೀನಿನ ಪಹಣಿ ಮತ್ತು ಪೋಡಿ/ವಿಭಜನಾ ಪತ್ರ
10.ಋಣಭಾರ ಪ್ರಮಾಣ ಪತ್ರ (ಇಸಿ) ಫಾರಂ ನಂ 15
11.ಸ್ಥಳೀಯ ಸಂಸ್ಥೆಗಳ ಇತ್ತೀಚಿನವರೆಗೆ ತೆರಿಗೆ ಪಾವತಿಸಿದ ರಸೀತಿ
12.ಸಕ್ಷಮ ಪ್ರಾಧಿಕಾರದಿಂದ ಪಡೆದ ಜಮೀನಿನ ಮಾರ್ಗದರ್ಶಿ ಬೆಲೆ
13.ಅಡಮಾನು ಸ್ವತ್ತು ಕಟ್ಟಡವಾಗಿದ್ದಲ್ಲಿ, ವಂಶವೃಕ್ಷದೊಂದಿಗೆ, ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ
14.ನೋಂದಾಯಿತ ಮೌಲ್ಯಮಾಪಕರಿಂದ ಮೌಲ್ಯಮಾಪನ ವರದಿ- ಮೌಲ್ಯಮಾಪನ ಪ್ರಮಾಣಪತ್ರ
15.ಸ್ವಯಂ ಘೋಷಣೆ

ಆಯ್ಕೆಯ ನಂತರ:

1.ಪರಿಶೀಲನಾ ಸಮಿತಿಯ ಆದೇಶ
2.ಫಲಾನುಭವಿಯ ಪ್ರಮಾಣ ಪತ್ರ
3.ಫಲಾನುಭವಿ ಮತ್ತು ಜಾಮೀನುದಾರರ ಜಂಟಿ ಪ್ರಮಾಣ ಪತ್ರ
4.ಡಿಮ್ಯಾಂಡ್‌ ಪ್ರಾಮಿಸರಿ ನೋಟ್‌ (ಡಿ ಪಿ ಎನ್)‌
5.ಹೈಪೋಥಿಕೇಷನ್‌ ಮತ್ತು ಅಡಮಾನ ಪತ್ರ
6.ಮರುಪಾವತಿ ಪತ್ರ
7.ಜಾಮೀನು ಪತ್ರ
8.ಸಾಲ ಕರಾರು ಪತ್ರ
9.ಪರಿಗಣನೆಯ ವರದಿ
10.ಅರ್ಜಿದಾರರಿಂದ ಸಾಲ ಸ್ವೀಕೃತ
11.ಜಾಮೀನುದಾರಿಂದ ಸಾಲ ಸ್ವೀಕೃತಿ
12.ಮೆಮೊರಾಂಡಮ್‌ ಆಫ್‌ ಡೆಪಾಸಿಟ್‌ ಆಫ್‌ ಟೈಟಲ್‌

×
ABOUT DULT ORGANISATIONAL STRUCTURE PROJECTS