ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಕರ್ನಾಟಕ ಸರ್ಕಾರ

Back
‘ಅರಿವು’ (ವಿದ್ಯಾಭ್ಯಾಸ ಸಾಲ) ಯೋಜನೆ

ಅರಿವು ಸಾಲ ಯೋಜನೆ

       

ಈ ಯೋಜನೆಯಡಿಯಲ್ಲಿ ವೃತ್ತಿಪರ ಶಿಕ್ಷಣ ಅಂದರೆ MBBS, MD, MS, B.E, B.Tech, M.E, M.Tech, BDS, MDS, B.Ayush, M.Ayush, MBA, MCA, LLB, B.Arch, M.Arch, B.Sc in Horticulture, Agriculture, Dairy Technology, Forestry, Veterinary, Animal sciences, Food Technology, Bio Technology, Fisheries, Sericulture, Home/community Sciences, Food Nutrition and Dietetics, B.Pharma, M.Pharma, Pharma.D,and D.Pharma ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರಿಗೆ ಪ್ರತಿ ವರ್ಷಕ್ಕೆ ರೂ.50,000/- ದಿಂದ ರೂ.3,00,000/-ವರೆಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ. ವ್ಯಾಸಂಗ ಪೂರ್ಣಗೊಳಿಸಿದ 6 ತಿಂಗಳ ನಂತರ ಅಂತಹ ವಿದ್ಯಾರ್ಥಿಯು ಶೇ2ರ ಸೇವಾಶುಲ್ಕದೊಂದಿಗೆ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯಡಿ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ.8.00ಲಕ್ಷಗಳು ಮೀರಿರಬಾರದು.


ಮಾರ್ಗಸೂಚಿಗಳು:


1.ವಿದ್ಯಾಬ್ಯಾಸ ಸಾಲವನ್ನು ಪಡೆಯ ಬಯಸುವ ವಿದ್ಯಾರ್ಥಿಗಳು ಅರ್ಜಿಗಳನ್ನು ಆನ್‍ಲೈನ್ ಸಾಫ್ಟ್‍ವೇರ್ ಮೂಲಕ ಸಲ್ಲಿಸಬೇಕು.
2.ಆಯಾ ಜಿಲ್ಲಾ ಕಛೇರಿಗಳಲ್ಲಿ ಆನ್‍ಲೈನ್‍ನಲ್ಲಿ ನವೀಕರಣ ಅರ್ಜಿಗಳನ್ನು ಸಲ್ಲಿಸುವಾಗ ಹಿಂದಿನ ವರ್ಷದಲ್ಲಿ ನಿಗಮವು ಬಿಡುಗಡೆಮಾಡಿದ ಸಾಲದ 12% ಮೊತ್ತವನ್ನು ವಿದ್ಯಾರ್ಥಿಗಳು ಪಾವತಿಸಬೇಕಾಗುತ್ತದೆ.
3.ಅಲ್ಪಸಂಖ್ಯಾತವರ್ಗಕ್ಕೆ ಸೇರಿದ (ಕುಟುಂಬದ ಆದಾಯ ಮಿತಿ ರೂ. 8.00 ಲಕ್ಷಗಳನ್ನು ಮೀರಬಾರದು) ವಿದ್ಯಾರ್ಥಿಯ ಕುರಿತು ತಹಶೀಲ್ದಾರ್‍ರಿಂದ ಜಾತಿ/ಆದಾಯ ಪ್ರಮಾಣೀಕರಣವನ್ನು ಸಂಸ್ಥೆಗಳು / ಕಾಲೇಜುಗಳು ಖಚಿತಪಡಿಸಿಕೊಳ್ಳಬೇಕು.
4.ವಿದ್ಯಾರ್ಥಿಯ ಕುಟುಂಬದ ಆದಾಯಮಿತಿರೂ. 8.00 ಲಕ್ಷಮೀರಬಾರದು.
5.ವಿದ್ಯಾರ್ಥಿಗಳಿಗೆ ಸಾಲದ ಮೊತ್ತವನ್ನು ನಿಗಮದಿಂದ ನೇರವಾಗಿ ಡಿಬಿಟಿ ಮೂಲಕ ಕಾಲೇಜಿನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
6.ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಆಯ್ಕೆಯಾದ ಎಂ.ಬಿ.ಬಿ.ಎಸ್, ಎಂ.ಡಿ/ಎಂ.ಎಸ್ ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಟ ರೂ.3.00 ಲಕ್ಷದವರೆಗೆ ಸಾಲ ನೀಡಲಾಗುವುದು.
7.ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಆಯ್ಕೆಯಾದ ಬಿ.ಡಿ.ಎಸ್.ಎಂ.ಡಿ.ಎಸ್ ಕೋರ್ಸ್‍ಗಳಿಗೆ ಗರಿಷ್ಟ ರೂ.1.00 ಲಕ್ಷದವರೆಗೆ, ಹಾಗೂ ಬಿ.ಆಯುಷ್ ಮತ್ತು ಎಂ.ಆಯುಷ್ ಕೋರ್ಸ್ ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಟ ರೂ.50,000/- ಗಳನ್ನು ಸಾಲವಾಗಿ ನೀಡಲಾಗುವುದು.
8.ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಆಯ್ಕೆಯಾದ ಅಂದರೆ ಬ್ಯಾಚುಲಾರ್ ಆಫ್ ಆರ್ಕಿಟೆಕ್ಟ/ಇಂಜಿನಿಯರಿಂಗ್/ಟೆಕ್ನಾಲಜಿ (ಬಿ.ಇ./ಬಿ.ಟೆಕ್), ಎಂ.ಟೆಕ್, ಎಂ.ಇ. ಬಿ.ಆರ್ಕ್. ಎಂ.ಆರ್ಕ್. ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು.
9.ಅಲ್ಲದೆ MBA,MCA, LLB ಕೋರ್ಸಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಠ ರೂ.50,000/-ಗಳನ್ನು ಸಾಲವಾಗಿ ನೀಡಲಾಗುವುದು.

10. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಆಯ್ಕೆಯಾದ B.Sc. in Horticulture, Agriculture, Dairy Technology, Forestry, Veterinary, Animal science, Food Technology, Bio Technology, Fisheries, Sericulture, Home/community Sciences, Food Nutrition and Dietetics, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು.

11. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿ.ಇ.ಟಿ/ನೀಟ್) ಆಯ್ಕೆಯಾದ B.Pharma, M.Pharma, Pharma.D,and D.Pharma, ಕೋರ್ಸ್‍ಗಳಿಗೆ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಮಾತ್ರ ಗರಿಷ್ಟ ರೂ.50,000/-ಗಳು ಸಾಲವಾಗಿ ನೀಡಲಾಗುವುದು. 

 


ಅರ್ಹತೆಗಳು:


(ಅ)ವಿದ್ಯಾರ್ಥಿಯು ರಾಜ್ಯದ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
(ಆ)ವಿದ್ಯಾರ್ಥಿಯು ರಾಜ್ಯದ ಖಾಯಂ ನಿವಾಸಿ ಯಾಗಿರಬೇಕು.
(ಇ)ವಿದ್ಯಾರ್ಥಿಯ ವಾರ್ಷಿಕ ಆದಾಯ ರೂ.8.00 ಲಕ್ಷಮೀರಬಾರದು.


ದಾಖಲೆಗಳು:


1. ವಿದ್ಯಾರ್ಥಿಯ ಆನ್ಲಲೈನ್ ಅರ್ಜಿ
2. ವಿದ್ಯಾರ್ಥಿಯ ಇತ್ತೀಚಿನ 2 ಪಾಸ್‍ಪೂರ್ಟ್ ಅಳತೆಯ ಭಾವಚಿತ್ರ
3. ವಿದ್ಯಾರ್ಥಿಯ ಜಾತಿ ಮತ್ತುಆದಾಯ ಪ್ರಮಾಣಪತ್ರ
4. ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ
5. ವಿದ್ಯಾರ್ಥಿಯ ಅಇಖಿ ಪ್ರವೇಶ ಆದೇಶದ ಪತ್ರ
6. ವಿದ್ಯಾರ್ಥಿಯ ಓಇಇಖಿ ಪ್ರವೇಶ ಆದೇಶದ ಪತ್ರ
7. ವಿದ್ಯಾರ್ಥಿಯ SSLC/10ನೇ ತರಗತಿಯ ಅಂಕಪಟ್ಟಿ
8. ವಿದ್ಯಾರ್ಥಿಯ ಡಿಪ್ಲೋಮ/ಪಿ.ಯು.ಸಿ ಅಂಕಪಟ್ಟಿ
9.ಇಂಡಿಮ್ನಿಟೀ (ನಷ್ಟಪರಿಹಾರ) ಬಾಂಡ್
10.ವಿದ್ಯಾರ್ಥಿಯ ಕಾಲೇಜು ಬ್ಯಾಂಕ್ ವಿವರ
11.ವಿದ್ಯಾರ್ಥಿಯ ಬೋನಾಫೈಡ್/ಸ್ಟಡಿ ಸರ್ಟಿಫಿಕೇಟ್
12.ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ
13.ಪೋಷಕರ ಸ್ವಯಂ ಘೋಷಣೆ ಪತ್ರ.
14.ಕಾಲೇಜು ಶುಲ್ಕ ರಚನೆ .

×
ABOUT DULT ORGANISATIONAL STRUCTURE PROJECTS