ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಕರ್ನಾಟಕ ಸರ್ಕಾರ

Back
ಶ್ರಮ ಶಕ್ತಿ

‘ಶ್ರಮ ಶಕ್ತಿ' ಯೋಜನೆ

                ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಕಡಿಮೆ ಬಡ್ಡಿದರದಲ್ಲಿ ರೂ.50,000/- ಸಾಲಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ, ಶೇ.50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ.50ರಷ್ಟು ಹಣವನ್ನು ‘ಬ್ಯಾಕ್‍ಎಂಡ್ ಸಹಾಯಧನ’ವನ್ನಾಗಿ ಪರಿಗಣಿಸಲಾಗುತ್ತದೆ. ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲನಾದಲ್ಲಿ, ಶೇ.50ರಷ್ಟು ಬ್ಯಾಕ್‍ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.

ಅರ್ಹತೆಗಳು:

(ಅ) ಅರ್ಜಿದಾರರು ರಾಜ್ಯದ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
(ಆ) ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
(ಇ) ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷಗಳು.
(ಈ)ಎಲ್ಲಾ ಮೂಲಗಳಿಂದ ಕೌಟುಂಬಿಕ ವಾರ್ಷಿಕ ಆದಾಯ ರೂ.6.00 ಲಕ್ಷ ದೊಳಗಿರಬೇಕು
(ಉ)ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ/ಸಾರ್ವಜನಿಕ ವಲಯದ ಘಟಕ ಸರ್ಕಾರದ ಉದ್ಯೋಗಿಯಾಗಿರಬಾರದು
(ಊ) ಅರ್ಜಿದಾರರು ಕೆ ಎಂ ಡಿ ಸಿ ಯಲ್ಲಿಸುಸ್ತಿದಾರಯಾಗಿರಬಾರದು.


ದಾಖಲೆಗಳು:


1.ಆನ್‍ಲೈನ್ ಅರ್ಜಿ
2.ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ
3.ಜಾತಿ, ಆದಾಯ ಪ್ರಮಾಣ ಪತ್ರ
4.ಆಧಾರ್ ಕಾರ್ಡ್ ಪ್ರತಿ
5.ಯೋಜನಾ ವರದಿ


ಆಯ್ಕೆ ಸಮಿತಿ:


1.ಆಯಾ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರು - ಅಧ್ಯಕ್ಷರು
2.ತಾಲ್ಲೂಕಿನಲ್ಲಿ ಖಾಯಂ ಆಗಿ ವಾಸಿಸುತ್ತಿರುವ ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು - ಸಹ ಅಧ್ಯಕ್ಷರು
3.ಸಬಂಧಿಸಿದ ತಾಲ್ಲೂಕು ತಹಶೀಲ್ದಾರರು - ಸದಸ್ಯರು
4.ಕಾರ್ಯನಿರ್ವಾಹಣಾಧಿಕಾರಿ ತಾಲ್ಲೂಕು ಪಂಚಾಯತ್-ಸದಸ್ಯರು
5.ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ -ಸದಸ್ಯರು
6.ಜಿಲ್ಲಾ ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕೆ-ಸದಸ್ಯರು
7.ಜಿಲ್ಲಾ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-ಸದಸ್ಯರು
8.ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ- ಸದಸ್ಯ ಕಾರ್ಯದರ್ಶಿ

×
ABOUT DULT ORGANISATIONAL STRUCTURE PROJECTS