ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಕರ್ನಾಟಕ ಸರ್ಕಾರ

Back
ವಿದೇಶಿ ವಿದ್ಯಾಭ್ಯಾಸ ಸಾಲ

ವಿದೇಶಿ ವಿದ್ಯಾಭ್ಯಾಸ ಸಾಲ

 

   ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಆರ್ಥಿಕ/ಸಾಲ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ವಿದೇಶದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಲ್ಲಿ ಅಥವಾ ಭಾರತದಲ್ಲಿನ IIM'S, IIT'S ಮತ್ತು ISC ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಮಾಡಬಯಸುವ ವಿದ್ಯಾರ್ಥಿಗಳಿಗೆ ಸಾಲವನ್ನು ಒದಗಿಸಲಾಗುವುದು.

 

ಅರ್ಹತೆಗಳು: 

  1. ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  2. ವಿದ್ಯಾರ್ಥಿಯು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು (ಮುಸ್ಲಿಂ, ಕ್ರಿಶ್ಚಿಯನ್‌, ಜೈನ್‌, ಬುದ್ಧಿಸ್ಟ್‌, ಸಿಖ್‌ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು).
  3. ವಿದ್ಯಾರ್ಥಿಯು ಹಿಂದಿನ ವರ್ಷದಲ್ಲಿ ಕನಿಷ್ಠ 60% ಅಂಕವನ್ನು ಪಡೆದಿರಬೇಕು.
  4. ವಿದೇಶ ವಿಶ್ವವಿದ್ಯಾಲಯದಿಂದ ಆಫರ್‌ ಲೆಟರ್‌ ಪಡೆದಿರಬೇಕು.
  5. ನಿಗಮಕ್ಕೆ ಆಸ್ತಿಯ (ಕಟ್ಟಡ/ಜಮೀನು) ಅಡಮಾನದ ಮೇಲೆ ಮಾತ್ರ ಸಾಲ ಒದಗಿಸಲಾಗುವುದು.ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು.
  6. ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿ ವಿದೇಶ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನ ಪಡೆಯದೆ ಇರುವಂತಹ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಸಾಲಕ್ಕಾಗಿ ಪರಿಗಣಿಸುವುದು.
  7. ಕುಟುಂಬದ ವಾರ್ಷಿಕ ಆದಾಯ ರೂ8.00 ಲಕ್ಷಗಳಿಗಿಂತ ಕಡಿಮೆ ಇರುವ ಅರ್ಜಿದಾರರಿಗೆ ರೂ 20.00 ಲಕ್ಷವರೆಗೆ ಶೇ 3 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.
  8. ಕುಟುಂಬದ ವಾರ್ಷಿಕ ಆದಾಯ ರೂ8.00 ಲಕ್ಷದಿಂದ ರೂ15.00 ಲಕ್ಷದವರೆಗೆ ಇರುವ ಅರ್ಜಿದಾರರಿಗೆ ರೂ 10.00 ಲಕ್ಷವರೆಗೆ ಶೇ 5 ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.

 

×
ABOUT DULT ORGANISATIONAL STRUCTURE PROJECTS