ಎನ್ ಎಂ ಡಿ ಎಫ್ ಸಿ ಯೋಜನೆಗಳು

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮದ

(ಎನ್.ಎಂ.ಡಿ.ಎಫ್.ಸಿ) ಯೋಜನೆಗಳು

 

            ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (ದೆಹಲಿ) ದಿನಾಂಕ 30.09.1994ರಲ್ಲಿ ಸ್ಥಾಪಿತಗೊಂಡಿದ್ದು, ಮತೀಯ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಕಡುಬಡವರ ಆರ್ಥಿಕಾಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ರಾಜ್ಯ ವಿತರಣಾ ಸಂಸ್ಥೆಗಳ (ಎಸ್.ಸಿ.ಎ) ಮೂಲಕ ವಿವಿಧ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಕರ್ನಾಟಕದಲ್ಲಿ ಎನ್.ಎಂ.ಡಿ.ಎಫ್.ಸಿ.ಯ ರಾಜ್ಯ ವಿತರಣಾ ಸಂಸ್ಥೆಯಾಗಿರುತ್ತದೆ. ಎನ್.ಎಂ.ಡಿ.ಎಫ್.ಸಿ.ಯ ಕೆಳಕಂಡ ಯೋಜನೆಗಳಡಿಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಅರ್ಹ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯವನ್ನು ನೀಡುತ್ತಿದೆ:

 

ಅವಧಿ ಸಾಲ ಯೋಜನೆ

 

            ಸದರಿ ಯೋಜನೆಯು ಏಕವ್ಯಕ್ತಿಪರ (Individual) ಯೋಜನೆಯಾಗಿದ್ದುಕ್ರೆಡಿಟ್ ಲೈನ್-1ರ ನಿಯಮಾವಳಿಯನ್ವಯ ಪ್ರತಿ ಫಲಾನುಭವಿಗೆ ವ್ಯಾಪಾರ/ಆರ್ಥಿಕ ಚಟುವಟಿಕೆಗಳಿಗಾಗಿ ರೂ.50,000/- ದಿಂದ ರೂ.20.00 ಲಕ್ಷದವರೆಗೆ ಸಾಲಿಯಾನ ಶೇ.6ರ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತದೆ. ಹಾಗೆಯೇ, ಕ್ರೆಡಿಟ್ ಲೈನ್-2ರ ನಿಯಮಾವಳಿಯನ್ವಯ ಪ್ರತಿ ಫಲಾನುಭವಿಗೆ ರೂ.30.00 ಲಕ್ಷದವರೆಗೆ ಪುರುಷರಿಗೆ ಸಾಲಿಯಾನ ಶೇ.8ರ ಬಡ್ಡಿ ದರದಲ್ಲಿ ಮತ್ತು ಮಹಿಳೆಯರಿಗೆ ಶೇ.6ರ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತದೆ.ಒಟ್ಟು ಸಾಲದಲ್ಲಿ ಎನ್.ಎಂ.ಡಿ.ಎಫ್.ಸಿ.ಯ ಪಾಲು ಶೇ.90, ಕೆ.ಎಂ.ಡಿ.ಸಿ.ಯ ಪಾಲು ಶೇ.5 ಆಗಿದ್ದು, ಇನ್ನುಳಿದ ಶೇ.5ರಷ್ಟು ವಂತಿಕೆಯನ್ನು ಫಲಾನುಭವಿಯು ಭರಿಸಬೇಕಾಗುತ್ತದೆ.ಫಲಾನುಭವಿಯು ಸಾರಿಗೆ ಕ್ಷೇತ್ರದಲ್ಲಿ ಸಾರಿಗೆ ವಾಹನವನ್ನು ಕೊಳ್ಳಲು ಸಹ ನಿಗಮವು ಸಾಲಸೌಲಭ್ಯವನ್ನು ನೀಡುತ್ತದೆ.ಫಲಾನುಭವಿಯು ಸಾಲವನ್ನು 36/60 ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.ನಿಗಮವು ಮಂಜೂರು ಮಾಡುವ ಅವಧಿ ಸಾಲಕ್ಕಾಗಿ ಫಲಾನುಭವಿಯು ಸ್ಥಿರಾಸ್ತಿಯನ್ನು ಅಡಮಾನ ಮಾಡಬೇಕಾಗುತ್ತದೆ.

 

ಅರ್ಹತೆಗಳು:

 

(1)       ಸರ್ಕಾರಿ ಆದೇಶದಲ್ಲಿ ಸೂಚಿಸಿದಂತೆ ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು

(2)       ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು

(3)       ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ನಗರ ಪ್ರದೇಶದಲ್ಲಿ ರೂ.1,20,000/-ನ್ನು ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.98,000/-ದ ಮಿತಿಯಲ್ಲಿರಬೇಕು

(4)       ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು

(5)       ಅರ್ಜಿದಾರರು ‘ಆಧಾರ್’ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು.

(6)       ಅರ್ಜಿದಾರರು ಯೋಜನಾ ವರದಿ/ದರಪಟ್ಟಿಯನ್ನು ಸಲ್ಲಿಸಬೇಕು.

 

ಮೈಕ್ರೋ ಫೈನಾನ್ಸ್ ಯೋಜನೆ

 

            ರಾಜ್ಯ ಸರ್ಕಾರ ಪ್ರಾಯೋಜಿತ ಸಣ್ಣ (ಮೈಕ್ರೋ) ಸಾಲ ಯೋಜನೆಯ ಮಾದರಿಯಲ್ಲಿಯೇ, ನಿಗಮವು ಎನ್.ಎಂ.ಡಿ.ಎಫ್.ಸಿ.ಯ ಮೈಕ್ರೋ ಫೈನಾನ್ಸ್ ಯೋಜನೆಯಡಿಯಲ್ಲಿ ಸಾಲಸೌಲಭ್ಯವನ್ನು ನೀಡುತ್ತದೆ.  ಆದರೆ, ಈ ಯೋಜನೆಯಡಿ ಸಹಾಯಧನ ಸೌಲಭ್ಯ ಇರುವುದಿಲ್ಲ. ಆರ್ಥಿಕ ಮಿತವ್ಯಯವನ್ನು (Thrift) ಗುರಿಯಾಗಿಟ್ಟುಕೊಂಡಿರುವ ಮತ್ತು ಉತ್ತಮ ಹಣಕಾಸಿನ ವ್ಯವಹಾರ ನಡೆಸುತ್ತಿರುವ ಹಾಗೂ ನೋಂದಾಯಿತ ಸ್ವ-ಸಹಾಯ ಸಂಘಗಳಲ್ಲಿ ಸದಸ್ಯತ್ವ ಪಡೆದಿರುವ ಪ್ರತಿ ಸದಸ್ಯರಿಗೆ ನಿಗಮದಿಂದ ರೂ.1.00 ಲಕ್ಷದವರೆಗೆ ಸಾಲಸೌಲಭ್ಯ ನೀಡಲಾಗುತ್ತದೆ.

 

            ಕ್ರೆಡಿಟ್ ಲೈನ್-1ರ ನಿಯಮಾವಳಿಯನ್ವಯ ಪ್ರತಿ ಸದಸ್ಯರಿಗೆ ಸಾಲಿಯಾನ ಶೇ.7ರ ಬಡ್ಡಿ ದರದಲ್ಲಿ ಮತ್ತು ಕ್ರೆಡಿಟ್ ಲೈನ್-2ರ ನಿಯಮಾವಳಿಯನ್ವಯ ಪ್ರತಿ ಪುರುಷ ಸದಸ್ಯರಿಗೆ ಸಾಲಿಯಾನ ಶೇ.10ರ ಬಡ್ಡಿ ದರದಲ್ಲಿ ಮತ್ತು ಮಹಿಳಾ ಸದಸ್ಯರಿಗೆ ಶೇ.8ರ ಬಡ್ಡಿ ದರದಲ್ಲಿ ರೂ.1.50 ಲಕ್ಷದವರೆಗೆ ಸಾಲಸೌಲಭ್ಯವನ್ನು ನೀಡಲಾಗುತ್ತದೆ.ಫಲಾನುಭವಿಯು ತಾನು ಪಡೆದ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.ಒಟ್ಟಿನಲ್ಲಿ, ಈ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿನ ಕೊಳಗೇರಿಯಲ್ಲಿ ಚದುರಿ ಹೋಗಿರುವ (Scattered)ಹಾಗೂ ಬ್ಯಾಂಕ್ ಸಾಲಸೌಲಭ್ಯದಿಂದ ವಂಚಿತರಾಗಿರುವ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಸಾಲಸೌಲಭ್ಯವನ್ನು ನೀಡಲಾಗುತ್ತದೆ.

 

ಅರ್ಹತೆಗಳು:

 

(1)       ಸರ್ಕಾರಿ ಆದೇಶದಲ್ಲಿ ಸೂಚಿಸಿದಂತೆ ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು

(2)       ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು

(3)       ಅರ್ಜಿದಾರರು ನೋಂದಾಯಿತ ಸ್ವ-ಸಹಾಯ ಸಂಘಗಳಲ್ಲಿ ಸದಸ್ಯತ್ವ ಹೊಂದಿರಬೇಕು.

(4)       ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ನಗರ ಪ್ರದೇಶದಲ್ಲಿ ರೂ.1,20,000/-ನ್ನು ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.98,000/-ದ ಮಿತಿಯಲ್ಲಿರಬೇಕು

(5)       ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು

(6)       ಅರ್ಜಿದಾರರು ‘ಆಧಾರ್’ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು.

 

ವಿದ್ಯಾಭ್ಯಾಸ ಸಾಲ ಯೋಜನೆ

 

            ಸದರಿ ಯೋಜನೆಯಡಿ ಕ್ರೆಡಿಟ್ ಲೈನ್-1ರ ನಿಯಮಾವಳಿಯನ್ವಯ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ 05 ವರ್ಷಗಳ ವೃತ್ತಿಪರ ಮತ್ತು ತಾಂತ್ರಿಕ ವ್ಯಾಸಂಗಕ್ಕಾಗಿ ಸಾಲಿಯಾನ ಶೇ.3ರ ಬಡ್ಡಿ ದರದಲ್ಲಿ ರೂ.15.00 ಲಕ್ಷಗಳವರೆಗೆ (ವಿದೇಶ ವ್ಯಾಸಂಗಕ್ಕಾಗಿ ರೂ.20.00 ಲಕ್ಷಗಳವರೆಗೆ) ಮತ್ತು ಕ್ರೆಡಿಟ್ ಲೈನ್-2ರ ನಿಯಮಾವಳಿಯನ್ವಯ ಪುರುಷ ವಿದ್ಯಾರ್ಥಿಗೆ ಸಾಲಿಯಾನ ಶೇ.8ರ ಬಡ್ಡಿ ದರದಲ್ಲಿ ಮತ್ತು ಮಹಿಳಾ ವಿದ್ಯಾರ್ಥಿಗೆ ಶೇ.5ರ ಬಡ್ಡಿ ದರದಲ್ಲಿ ರೂ.20.00 ಲಕ್ಷಗಳವರೆಗೆ (ವಿದೇಶ ವ್ಯಾಸಂಗಕ್ಕಾಗಿ ರೂ.30.00 ಲಕ್ಷಗಳವರೆಗೆ) ಸಾಲಸೌಲಭ್ಯ ನೀಡಲಾಗುತ್ತದೆ.

 

            ಎನ್.ಎಂ.ಡಿ.ಎಫ್.ಸಿ.ಯು ಅಲ್ಪಸಂಖ್ಯಾತ ಸಮುದಾಯಗಳ ಅರ್ಹ ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಸಾಲಸೌಲಭ್ಯ ನೀಡುವ ಉದ್ದೇಶವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ತಾವು ಪಡೆದ ಸಾಲವನ್ನು ಅವರ ವ್ಯಾಸಂಗ ಪೂರ್ಣಗೊಂಡ ನಂತರ 05 ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.

ಅರ್ಹತೆಗಳು:

 

(1)       ಸರ್ಕಾರಿ ಆದೇಶದಲ್ಲಿ ಸೂಚಿಸಿದಂತೆ ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು

(2)       ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು

(3)       ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯರೂ.6.00 ಲಕ್ಷಗಳ ಮಿತಿಯಲ್ಲಿರಬೇಕು

(4)       ಅರ್ಜಿದಾರರು ‘ಆಧಾರ್’ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು.

 

ಸಾಂಪ್ರದಾಯಿಕ ಕುಶಲಕರ್ಮಿಗಳು/ಕರಕುಶಲ ವಸ್ತುಗಳ ತಯಾರಕರಿಗೆ “ವಿರಾಸತ್” ಯೋಜನೆ (“Virasat” – A Credit Scheme for Artisans/Craft Persons)

 

            ಸದರಿ ಯೋಜನೆಯು ಹೊಸ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ, ಪುರುಷ ಕುಶಲಕರ್ಮಿಗಳು/ಕರಕುಶಲ ವಸ್ತುಗಳ ತಯಾರಕರು ಸಾಲಿಯಾನ ಶೇ.5ರ ಬಡ್ಡಿ ದರದಲ್ಲಿ ಮತ್ತು ಮಹಿಳಾ ಕುಶಲಕರ್ಮಿಗಳು/ಕರಕುಶಲ ವಸ್ತುಗಳ ತಯಾರಕರು ಶೇ.4ರ ಬಡ್ಡಿ ದರದಲ್ಲಿ ಗರಿಷ್ಠ ರೂ.10.00 ಲಕ್ಷಗಳ ಸಾಲವನ್ನು ಪಡೆಯಬಹುದಾಗಿದೆ. ಅಲ್ಲದೆ ಮಹಿಳೆಯರಿಗೆ ಶೇ.1ರ ಡಿಸ್ಕೌಂಟ್ ಸಹ ಇರುತ್ತದೆ.ಸದರಿ ಯೋಜನೆಯಡಿಯಲ್ಲಿ ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಅಲ್ಪಸಂಖ್ಯಾತರಿಗೆ ನಿರಂತರ ಉದ್ಯೋಗ ಹೊಂದುವ ಅವಕಾಶವಿರುತ್ತದೆ.

 

            ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ನಡೆಯುವ ಉಸ್ತಾದ್ ಯೋಜನೆಯಡಿ ಎನ್.ಎಂ.ಡಿ.ಎಫ್.ಸಿ.ಯು ನಡೆಸುವ ಹ್ಯೂನಾರ್ ಹಾತ್ ವಸ್ತುಪ್ರದರ್ಶನದಲ್ಲಿ ಫಲಾನುಭವಿಗಳು ಭಾಗವಹಿಸಿ, ಅವರು ತಯಾರಿಸಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡಲು/ಮಾರಾಟ ಆದೇಶ (Supply Order) ಪಡೆಯಲು ಅನುಕೂಲವಾಗುತ್ತದೆ.ಸದರಿ ಕುಶಲಕರ್ಮಿಗಳು/ಕರಕುಶಲ ವಸ್ತುಗಳ ತಯಾರಕರು ಅವರಿಗೆ ಬೇಕಾದ ಕಚ್ಚಾವಸ್ತುಗಳು/ಟೂಲ್ಸ್‍ಗಳು/ಯಂತ್ರೋಪಕರಣಗಳನ್ನು ಖರೀದಿಸಲು ಅಗತ್ಯವಿರುವ ದುಡಿಯುವ ಬಂಡವಾಳ ಮತ್ತು ಸ್ಥಿರ ಬಂಡವಾಳ ಹೊಂದುವುದಕ್ಕಾಗಿ ಸಾಲವನ್ನು ಪಡೆಯಬಹುದಾಗಿರುತ್ತದೆ.

 

            ಒಟ್ಟು ಸಾಲದಲ್ಲಿ ಎನ್.ಎಂ.ಡಿ.ಎಫ್.ಸಿ.ಯ ಪಾಲು ಶೇ.90, ಕೆ.ಎಂ.ಡಿ.ಸಿ.ಯ ಪಾಲು ಶೇ.5 ಆಗಿದ್ದು, ಇನ್ನುಳಿದ ಶೇ.5ರಷ್ಟು ವಂತಿಕೆಯನ್ನು ಫಲಾನುಭವಿಯು ಭರಿಸಬೇಕಾಗುತ್ತದೆ.ಫಲಾನುಭವಿಗಳಿಗೆಸಾಲ ಪಡೆದು ಘಟಕವನ್ನು ಸ್ಥಾಪಿಸಿಕೊಳ್ಳಲು 06 ತಿಂಗಳುಗಳ ಕಾಲಾವಕಾಶ (Moratorium Period)ದೊರೆಯುತ್ತದೆ.ನಂತರ, ಮುಂದಿನ ತ್ರೈಮಾಸಿಕ ತಿಂಗಳಿನಿಂದ ಪ್ರಾರಂಭಿಸಿ ಮೂರು ತಿಂಗಳಿಗೊಮ್ಮೆ ಮತ್ತು 05 ವರ್ಷಗಳ ಅವಧಿಯೊಳಗೆ ಫಲಾನುಭವಿಗಳು ಸಾಲವನ್ನು ಮರುಪಾವತಿ (Quarterly Repayment) ಮಾಡಬೇಕಾಗುತ್ತದೆ. ಹೀಗಿದ್ದರೂ, ಫಲಾನುಭವಿಗಳು 06 ತಿಂಗಳುಗಳ ಕಾಲಾವಕಾಶದ ಅವಧಿಗೂ (Moratorium Period) ಮತ್ತು ಮೊದಲ ಕಂತಿನ ಅಸಲಿನ ಮರುಪಾವತಿಗೂ ಬಡ್ಡಿಯನ್ನು ಪಾವತಿಬೇಕಾಗುತ್ತದೆ.

 

ಫಲಾನುಭವಿಗಳು ಸಾಲ ಪಡೆಯುವಾಗ ನೀಡಬೇಕಾದ ಭದ್ರತೆಯ ವಿವರಗಳು ಕೆಳಕಂಡಂತಿವೆ:

ರೂ.1.00 ಲಕ್ಷದವರೆಗಿನ ಸಾಲಕ್ಕೆ

ಸ್ವಯಂ-ಖಾತರಿ ಮತ್ತು ಪೋಸ್ಟ್ ಡೇಟೆಡ್ ಚೆಕ್‍ಗಳು

ರೂ.1.00 ಲಕ್ಷದಿಂದ ರೂ.5.00 ಲಕ್ಷಗಳ ಸಾಲಕ್ಕೆ

ಸರ್ಕಾರಿ/ಸಾರ್ವಜನಿಕ ಉದ್ದಿಮೆ/ಬ್ಯಾಂಕ್‍ನ ಒಬ್ಬ ಉದ್ಯೋಗಿಯ ಖಾತರಿ ಆಥವಾ ಆದಾಯ ತೆರಿಗೆ ಪಾವತಿಸುವ ವ್ಯಕ್ತಿಯಿಂದ ಖಾತರಿ ಮತ್ತು ಪೋಸ್ಟ್ ಡೇಟೆಡ್ ಚೆಕ್‍ಗಳು

ರೂ.10.00 ಲಕ್ಷಗಳ ಸಾಲಕ್ಕೆ

ಸರ್ಕಾರಿ/ಸಾರ್ವಜನಿಕ ಉದ್ದಿಮೆ/ಬ್ಯಾಂಕ್‍ನ ಇಬ್ಬರು ಉದ್ಯೋಗಿಗಳ ಖಾತರಿ ಆಥವಾ ಆದಾಯ ತೆರಿಗೆ ಪಾವತಿಸುವ ಇಬ್ಬರು ವ್ಯಕ್ತಿಗಳಿಂದ ಖಾತರಿ ಅಥವಾ ಸಾಲದ ಪ್ರಮಾಣಕ್ಕೆ ಸಮನಾದ ಸ್ಥಿರಾಸ್ತಿಯ ಕೊಲ್ಲಾಟರಲ್ ಅಡಮಾನ ಮತ್ತು ಪೋಸ್ಟ್ ಡೇಟೆಡ್ ಚೆಕ್‍ಗಳು

 

ಸದರಿ ಯೋಜನೆಯಡಿ ಸಾಲ ಪಡೆಯುವ ಫಲಾನುಭವಿಗಳಿಯ ಮರಣ ಮತ್ತು ಅಂಗವಿಕಲತೆ ಸಂಬಂಧದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿಮಾ ಕಂಪೆನಿಯ ಸಹಯೋಗದೊಂದಿಗೆ ಸಾಲದ ಅವಧಿಗೆ ವಿಮೆ ಪಡೆಯಲಾಗುತ್ತದೆ.

 

ಅರ್ಹತೆಗಳು

 

(1)       ಸರ್ಕಾರಿ ಆದೇಶದಲ್ಲಿ ಸೂಚಿಸಿದಂತೆ ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು

(2)       ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು

(3)       ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ನಗರ ಪ್ರದೇಶದಲ್ಲಿ ರೂ.1,20,000/- ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.98,000/-ದ ಮಿತಿಯಲ್ಲಿರಬೇಕು.

(4)       ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು

(5)       ಅರ್ಜಿದಾರರು ‘ಆಧಾರ್’ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು.

 

ಎನ್ ಎಂ ಡಿ ಎಫ್ ಸಿ ಯೋಜನೆಗಳ ಸಾಲ ನೀತಿಯ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಎನ್‌ಎಂಡಿಎಫ್‌ಸಿ ಸೈಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ

 

 

 

 

.


ಇತ್ತೀಚಿನ ನವೀಕರಣ​ : 07-12-2020 02:53 PM
ಅನುಮೋದಕರು: Karnataka Minorities Development Corporation

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 32129
 • ಇತ್ತೀಚಿನ ನವೀಕರಣ : 06-04-2021 03:55 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ