ತರಬೇತಿ ಪ್ರೋತ್ಸಾಹ ಮತ್ತು ಮೂಲಭೂತ ಸೌಲಭ್ಯದ ಬೆಂಬಲ ಯೋಜನೆ

.“ಆಟೋ ಸರ್ವಿಸ್, ಆಟೋ ಮೊಬೈಲ್, ಬಿದರಿ ಮತ್ತು ರೇಷ್ಮೆ, ಚನ್ನಪಟ್ಟಣದ ಕರಕುಶಲ ಚಟುವಟಿಕೆಗಳಿಗೆ ತರಬೇತಿ ಪ್ರೋತ್ಸಾಹ ಮತ್ತು ಮೂಲಭೂತ ಸೌಕರ್ಯ ನೀಡಲಾಗುವುದು.”

 

ಪ್ರಸ್ತುತ ಆಟೋ ಮೊಬೈಲ್ ಸರ್ವೀಸ್, ಬಿದರಿ ಹಾಗೂ ರೇಷ್ಮೆ ಚಟುವಟಿಕೆಗಳಿಗೆ ಸಂಬಂಧಿಸಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಇವರಿಗೆ ಸರ್ಕಾರದಿಂದ ಮಾನ್ಯತೆ ಪಡೆದ ತರಬೇತಿ ಸಂಸ್ಥೆಗಳಿಂದ ತರಬೇತಿಯನ್ನು ನೀಡಲಾಗುವುದು.

 

 

ಆಟೋಮೊಬೈಲ್ ಸರ್ವಿರ್ಸ್:

 

ರಾಜ್ಯದಲ್ಲಿನ ಮತೀಯ ಅಲ್ಪಸಂಖ್ಯಾತ ಅಶಿಕ್ಷಿತ ನಿರುದ್ಯೋಗ ಯುವಕ/ಯುವತಿಯರಿಗೆ ಆಟೋಮೊಬೈಲ್ ಸರ್ವಿಸ್‍ನಲ್ಲಿ ತರಬೇತಿಯನ್ನು ಹಾಗೂ ತರಬೇತಿಯ ನಂತರ ಇವರಿಗೆ ಸ್ವಂತ ಉದ್ಯೋಗ ಕಲ್ಪಿಸಲು ರಾಷ್ಟ್ರೀಕೃತ/ಷೆಡ್ಯೂಲ್/ಗ್ರಾಮೀಣ ಬ್ಯಾಂಕುಗಳಿಂದ ರೂ.2.00 ಲಕ್ಷಗಳಿಂದ ರೂ.5.00 ಲಕ್ಷವರೆಗೆ ನೀಡಲಾಗುವ ಸಾಲಕ್ಕೆ ನಿಗಮದಿಂದ ಶೇ.35 ರಷ್ಟು ಅಂದರೆ ಕನಿಷ್ಠ ರೂ.70000/-ಗಳಿಂದ ಗರಿಷ್ಠ ರೂ.1.25 ಲಕ್ಷಗಳ ಸಹಾಯಧನ ನೀಡಲಾಗುವುದು.

 

ಈ ತರಬೇತಿಗಳನ್ನು ಪ್ರತಿಷ್ಠಿತ ಆಟೋಮೊಬೈಲ್ ಸರ್ವಿಸ್ ಸಂಸ್ಥೆಗಳಾದ Toyota, Volvo, TATA, TAFE/ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ನೀಡಲು ಸೂಚಿಸಲಾಗಿದೆ.

 

ಜಿಲ್ಲೆಗೆ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಪ್ರಸ್ತಾವನೆಯನ್ನು ಬ್ಯಾಂಕಿನ ಕ್ಲೈಮ್ ಪತ್ರದ ಜೊತೆಗೆ  ಕಮಿಟ್‍ಮೆಂಟ್ ಲೇಟರ್‍ನ್ನು ಕೇಂದ್ರ ಕಛೇರಿಗೆ ಸಲ್ಲಿಸುವುದು.  ಗುರಿಗಿಂತ ಹೆಚ್ಚಿಗೆ ಪ್ರಸ್ತಾವನೆಯನ್ನು ನಿಗಮಕ್ಕೆ ಕಳುಹಿಸಬಾರದು.

 

ಬಿದರಿ ಚಟುವಟಿಕೆ:

 

ಈ ಕರಕುಶಲ ಚಟುವಟಿಕೆಯು ಬೀದರ್‍ನಲ್ಲಿ ಪ್ರಸಿದ್ಧಿಯನ್ನು ಹೊಂದಿದೆ. ಪ್ರಸ್ತುತ ಈ ಯೋಜನೆಯಡಿಯಲ್ಲಿ ಆಸಕ್ತಿಯುಳ್ಳ ಅರ್ಹ ಫಲಾನುಭವಿಗಳಿಗೆ ತರಬೇತಿಯನ್ನು ಹಾಗೂ ತರಬೇತಿಯ ನಂತರ ಇವರಿಗೆ ಸ್ವಂತ ಉದ್ಯೋಗವನ್ನು ಕಲ್ಪಿಸಲು ರಾಷ್ಟ್ರೀಕೃತ/ಷೆಡ್ಯೂಲ್/ ಗ್ರಾಮೀಣ ಬ್ಯಾಂಕ್‍ಗಳಿಂದ ರೂ.2.00 ಲಕ್ಷಗಳಿಂದ ರೂ.5.00 ಲಕ್ಷದವರೆಗೆ ನೀಡಲಾಗುವ ಸಾಲಕ್ಕೆ ನಿಗಮದಿಂದ ಶೇ.35 ರಷ್ಟು ಅಂದರೆ ಕನಿಷ್ಠ ರೂ.70000/- ಗಳಿಂದ ಗರಿಷ್ಠ ರೂ.1.25 ಲಕ್ಷಗಳ ಸಹಾಯಧನ ನೀಡಲಾಗುವುದು.

 

ಜಿಲ್ಲೆಗೆ ನಿಗದಿಪಡಿಸಿರುವ ಗುರಿಗೆ ಅನುಗುಣವಾಗಿ ಪ್ರಸ್ತಾವನೆಯನ್ನು ಬ್ಯಾಂಕಿನ ಕ್ಲೈಮ್ ಪತ್ರದ ಜೊತೆಗೆ ಕಮಿಟ್‍ಮೆಂಟ್ ಲೇಟರ್‍ನ್ನು ಕೇಂದ್ರ ಕಛೇರಿಗೆ ಸಲ್ಲಿಸುವುದು.ಗುರಿಗಿಂತ ಹೆಚ್ಚಿಗೆ ಪ್ರಸ್ತಾವನೆಯನ್ನು ನಿಗಮಕ್ಕೆ ಕಳುಹಿಸ ಬಾರದು.

 

ಚನ್ನಪಟ್ಟಣದ ಕರಕುಶಲ ಚಟುವಟಿಕೆ:

 

ಇದು ಚನ್ನಪಟ್ಟಣದ ಪ್ರಪಂಚದಾದ್ಯಂತ ಪ್ರಸಿದ್ಧಿ ಹೊಂದಿರುವ ಸಾಂಪ್ರದಾಯಿಕ ಕಲೆಯಾಗಿದೆ.ಚನ್ನಪಟ್ಟಣದಲ್ಲಿ ಸಾಂಪ್ರದಾಯಿಕ ಕಲಾವಿದರು ಈ ಚಟುವಟಿಕೆಯನ್ನು ಅವಲಂಬಿಸಿದ್ದಾರೆ.

 

ಅಲ್ಪಸಂಖ್ಯಾತರ ಸಮುದಾಯದ ಕುಶಲ ಕರ್ಮಿಗಳಿಗೆ  ಕರಕುಶಲ ನಿಗಮದಿಂದತರಬೇತಿಯನ್ನು ನೀಡಲು ಸೂಚಿಸಲಾಗಿದೆ. ತರಬೇತಿಯ ನಂತರ ಈ ಕುಶಲಕರ್ಮಿಗಳಿಗೆ ನಿಗಮದಿಂದ ರೂ.1.00 ಲಕ್ಷಗಳ ಸಾಲವನ್ನು ವಾರ್ಷಿಕ ಶೇ.3ರ ಬಡ್ಡಿದರದಲ್ಲಿ ನೀಡಲಾಗುವುದು. ಇದರಲ್ಲಿ ಶೇ.50ರಷ್ಟು ಸಹಾಯಧನವಾಗಿರುತ್ತದೆ.

 

ರೇಷ್ಮೆ ಉದ್ಯಮ.

 

ಈ ಉದ್ಯಮವು ರಾಮನಗರ ಜಿಲ್ಲೆಯಲ್ಲಿ ಪ್ರಸಿದ್ಧಿಯನ್ನು ಹೊಂದಿದೆ. ಹಲವಾರು  ಕುಟುಂಬಗಳು ಈ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕವಾಗಿ ಬಹಳಷ್ಟು ಅವಲಂಬಿತರಾಗಿರುತ್ತಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಉದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ.ಈ ಕಾರಣಗಳಿಂದ ಈ ಉದ್ಯಮವನ್ನು ಇನ್ನಷ್ಟು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಅವಲಂಬಿತರಾಗಿರುವ ಹಲವಾರು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಮತ್ತು ಯುವಕ /ಯುವತಿಯರಿಗೆ ಉತ್ತೇಜನ ನೀಡಲಾಗುವುದು.

 

ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರದ ರೇಷ್ಮ ಇಲಾಖೆ/ಕರ್ನಾಟಕ ಸರ್ಕಾರದ ನೊಂದಾಯಿತ ರೇಷ್ಮೆ ಚಟುವಟಿಕೆ ಸಂಸ್ಥೆಗಳಿಂದ ತರಬೇತಿಯನ್ನು ನೀಡಲು ಸೂಚಿಸಲಾಗಿದೆ. ತರಬೇತಿಯ ನಂತರ ಈ ಕುಶಲಕರ್ಮಿಗಳಿಗೆ ನಿಗಮದಿಂದ ರೂ.1.00 ಲಕ್ಷಗಳ ಸಾಲವನ್ನು ವಾರ್ಷಿಕ ಶೇ.3ರ ಬಡ್ಡಿದರದಲ್ಲಿ ನೀಡಲಾಗುವುದು.ಇದರಲ್ಲಿ ಶೇ.50ರಷ್ಟು ಸಹಾಯಧನವಾಗಿರುತ್ತದೆ.

 

 

 

 

 

.


ಇತ್ತೀಚಿನ ನವೀಕರಣ​ : 07-12-2020 02:15 PM
ಅನುಮೋದಕರು: Karnataka Minorities Development Corporation

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 32132
 • ಇತ್ತೀಚಿನ ನವೀಕರಣ : 06-04-2021 03:55 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ