ಸಣ್ಣ (ಮೈಕ್ರೋ) ಸಾಲ ಹಾಗೂ ಸಹಾಯಧನ ಯೋಜನೆ

ಸಣ್ಣ (ಮೈಕ್ರೋ) ಸಾಲ ಹಾಗೂ ಸಹಾಯಧನ ಯೋಜನೆ

 

            ಈ ಯೋಜನೆಯನ್ನು ಸ್ವ-ಸಹಾಯ ಗುಂಪಿನ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಅಂತಹ ಸಂಘಟಿತ ಗುಂಪು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 10 ರಿಂದ 20 ಸದಸ್ಯರನ್ನು ಹೊಂದಿದ್ದು,  ಅದರ ಸದಸ್ಯರು ಹಣಕಾಸು ಮಿತವ್ಯಯ ಚಟುವಟಿಕೆಯಲ್ಲಿ(thrift activity) ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿರಬೇಕು. ಅಂತಹ ಸಂಘದ ಸದಸ್ಯರು ತಮ್ಮಲ್ಲಿ ಇಬ್ಬರನ್ನು ಪ್ರತಿನಿಧಿ-01 ಮತ್ತು ಪ್ರತಿನಿಧಿ-02 ಆಗಿ ಆಯ್ಕೆಮಾಡಿಕೊಂಡಿರಬೇಕು. ಪ್ರತಿನಿಧಿಗಳು ಸ್ವ-ಸಹಾಯ ಗುಂಪಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಬ್ಯಾಂಕಿನಿಂದ ತಮ್ಮನ್ನು ‘ಅಧಿಕೃತ ರುಜುದಾರರು’ ಎಂಬ ಮಾನ್ಯತೆ ಪಡೆದಿರಬೇಕು.ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಮಹಿಳೆಯರು ರೂಪಿಸಿಕೊಂಡ ಸ್ವ-ಸಹಾಯ ಗುಂಪಿಗೆ ಪ್ರಾಶಸ್ತö್ಯ ಕೊಡಲಾಗುವುದು. ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರು ಪ್ರಾರಂಭಿಸಬಯಸುವ ಸಣ್ಣ ವ್ಯಾಪಾರ ಅಂದರೆ, ತಳ್ಳುವ ಗಾಡಿಯಲ್ಲಿ ತರಕಾರಿ/ಹಣ್ಣು ಮಾರಾಟ, ಕಲಾಯಿ ಮಾಡುವಿಕೆ, ಹಾಸಿಗೆ ಮಾಡುವಿಕೆ, ಪಾನ್ ಶಾಪ್, ಕಡ್ಲೆಕಾಯಿ ವ್ಯಾಪಾರ, ಸೈಕಲ್ ರಿಪೇರಿ, ಗ್ಯಾಸ್/ಆರ್ಕ್ ವೆಲ್ಡಿಂಗ್, ವಲ್ಕನೈಸಿಂಗ್, ಮೀನು ಮಾರಾಟ, ಟೀ ಶಾಪ್ ಮುಂತಾದುವುಗಳಿಗೆ ನಿಗಮವು ಪ್ರತಿ ಸದಸ್ಯನಿಗೆ ರೂ.10,000/- ಸಾಲ ಸೌಲಭ್ಯವನ್ನು (ರೂ.5,000/- ಸಾಲ ಮತ್ತು ರೂ.5,000/- ಸಹಾಯಧನ) ನೀಡುತ್ತದೆ. ನಿಗಮದಿಂದ ಸಾಲವನ್ನು ಸ್ವ-ಸಹಾಯ ಗುಂಪಿಗೆ ನೇರವಾಗಿ ಮಂಜೂರು ಮಾಡಲಾಗುವುದು.ನಂತರ ಅಂತಹ ಸ್ವ-ಸಹಾಯ ಗುಂಪು, ತಮ್ಮ ಸದಸ್ಯರಿಗೆ ಸಾಲವನ್ನು ಬಿಡುಗಡೆ ಮಾಡುಬೇಕು. ಸಾಲವನ್ನು ಶೇ.5ರ ಬಡ್ಡಿದರದಲ್ಲಿ 36 ಮಾಸಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ.   

 

 

 

 

.


ಇತ್ತೀಚಿನ ನವೀಕರಣ​ : 07-12-2020 02:28 PM
ಅನುಮೋದಕರು: Karnataka Minorities Development Corporation

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

  • ನಮ್ಮ ಬಗ್ಗೆ
  • ಜಾಲನಕ್ಷೆ
  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು
  • ಗೌಪ್ಯತಾ ನೀತಿ
  • ಸಹಾಯ
  • ಪರದೆ ವಾಚಕ
  • ಮಾರ್ಗಸೂಚಿಗಳು
  • ಆವೃತ್ತಿ : CeG/KRN 2.0
  • ಸಂದರ್ಶಕರು : 32131
  • ಇತ್ತೀಚಿನ ನವೀಕರಣ : 06-04-2021 03:55 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ