ಮೈಕ್ರೋಸಾಲಯೋಜನೆ(ವೈಯಕ್ತಿಕ) ಮಹಿಳೆಯರಿಗೆ (2020-21) ಮಾತ್ರ

ಮೈಕ್ರೋಸಾಲಯೋಜನೆ(ವೈಯಕ್ತಿಕ) ಮಹಿಳೆಯರಿಗೆ ಮಾತ್ರ

    (2020-21 ನೇಸಾಲಿಗೆಮಾತ್ರ)

 

ಕೋವಿಡ್-19 ಪಿಡುಗಿ ನಿಂದಾಗಿ ತೊಂದರೆ ಗೊಳಗಾದ, ನಿಗಮದ ಯಾವುದೇ ಯೋಜನೆಯಲ್ಲೂಇದುವರೆಗೆಸಾಲ,ಸಹಾಯಧನ ಯಾವುದನ್ನೂ ಪಡೆಯದ ಕಡುಬಡತನದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ 23,000 ಬಿಪಿಎಲ್ ಕಾರ್ಡ್ ಹೊಂದಿರುವ 25 ರಿಂದ 50 ವಯೋಮಾನದೊಳಗಿನ ಮಹಿಳೆಯರಿಗೆ, ತಳ್ಳುವಗಾಡಿಯಲ್ಲಿ ವ್ಯಾಪಾರ, ಬೀದಿವ್ಯಾಪಾರ, ಜಾತ್ರೆಗಳಲ್ಲಿ ವ್ಯಾಪಾರ,  ಕಿರಾಣಿ ಅಂಗಡಿ, ಅರಿಷಿನ / ಕುಂಕುಮ/ ಅಗರಬತ್ತಿ/ ಕರ್ಪೂರ, ಪಾದಚಾರಿ ಮಾರ್ಗದಲ್ಲಿ, ಟೀ / ಕಾಪಿಮಾರಾಟ, ಎಳನೀರು ವ್ಯಾಪಾರ,  ಹೂವಿನ ವ್ಯಾಪಾರ, ತರಕಾರಿ ವ್ಯಾಪಾರ, ಹಣ್ಣಿನ ವ್ಯಾಪಾರ, ಇನ್ನಿತರ ಸಣ್ಣ ವ್ಯಾಪಾರ ನಡೆಸಲು ಆರಂಭಿಕ ಬಂಡವಾಳಕ್ಕಾಗಿ ರೂ.10,000/-ಮೊತ್ತದ (ರೂ.8000/-ಸಾಲ +ರೂ.2,000/-ಸಬ್ಸಿಡಿ) ಅಲ್ಪಾವಧಿ ಸಾಲ ಯೋಜನೆ ಇದು.

 

ಸಾಲನೀಡಿಕೆ ವಿಧಾನ:

ಅ). ಅರ್ಜಿಸಲ್ಲಿಸುವಾಗ ನೀಡಬೇಕಾದ ದಾಖಲಾತಿಗಳು (ಮಹಿಳೆಯರುಮಾತ್ರ)

1.ಸರಳಅರ್ಜಿನಮೂನೆ(ಆನ್ ಲೈನಿನಲ್ಲೆ ನೀಡಲಾಗಿದೆ)

2.ಆಧಾರ್ ಕಾರ್ಡ್

3.ಬಿಪಿಎಲ್ ಕಾರ್ಡ್ /ಅಂತ್ಯೋದಯ ಕಾರ್ಡ್

4.ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ

(ಹೆಸರು, ಖಾತೆ ಸಂಖ್ಯೆ, ಫೋಟೋ, ಬ್ಯಾಂಕಿನ ವ್ಯವಸ್ಥಾಪಕರ ಸಹಿ ಇರುವ ಪುಟಮತ್ತು ಇತ್ತೀಚಿನ ಎರಡು ತಿಂಗಳ ವ್ಯವಹಾರ, ಶಿಲ್ಕು ತೋರಿಸುವ ಪುಟಗಳ ಜೆರಾಕ್ಸ್)

5.ಜಾತಿ/ ಆದಾಯ ಪ್ರಮಾಣಪತ್ರ

6.ವಿಧವೆಯರು: ಪಿಂಚಣಿ ದಾಖಲೆ ಅಥವಾ ಗಂಡನ ಮರಣ ಪ್ರಮಾಣಪತ್ರ

7.ವಿಕಲಚೇತನರು: ಅಧಿಕೃತ ಅಂಗವೈಕಲ್ಯ ಪ್ರಮಾಣಪತ್ರ.

 

ಆ).ಅರ್ಜಿಸಲ್ಲಿಕೆ ಮತ್ತು ಮಂಜೂರಾತಿ ಪ್ರಕ್ರಿಯೆ:

ಮೊದಲಹಂತ:

 

 1. ನಿಗಮದ ವೆಬ್ಸೈಟಿನಲ್ಲಿ ((kmdcmicro.karnataka.gov.in)ಸಾಲದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಆನ್ಲೈನಿನಲ್ಲೇ ಭರ್ತಿಮಾಡಿ, ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಅಪ್ಲೋಡ್ಮಾಡಿದಾಗ, ಅರ್ಜಿದಾರರು ನೀಡಿದಮೊಬೈಲ್ ಸಂಖ್ಯೆಗೆ ಓಟಿಪಿ ಸಂಖ್ಯೆಯೊಂದು ಬರುತ್ತದೆ. ಅದನ್ನುಆನ್ಲೈನಿನಲ್ಲಿ ದಾಖಲಿಸಿದಾಗ ಅರ್ಜಿಯು ನಿಗಮದ ವೆಬ್ಸೈಟಿನಲ್ಲಿ ರಿಜಿಸ್ಟರ್ಆಗುತ್ತದೆ. ಆಗಅರ್ಜಿದಾರರ ರಿಜಿಸ್ಟರ್ ಸಂಖ್ಯೆ ಮೊಬೈಲಿಗೂ ರವಾನೆಯಾಗುತ್ತದೆ. ರಿಜಿಸ್ಟರ್ಆದ ಆನ್ಲೈನ್ ಅರ್ಜಿಯ ಎರಡು ಪ್ರತಿಗಳನ್ನು ಪ್ರಿಂಟ್ಮಾಡಿ ಇಟ್ಟುಕೊಳ್ಳಬೇಕು.

 

 1. ಆನ್ಲೈನ್ಮೂಲಕ ಸಲ್ಲಿಸಲಾದ ಅರ್ಜಿಗಳನ್ನು, ನಿಗಮವು ನಿರ್ಧರಿಸಿದ ಮಾನದಂಡಗಳ ಆಧಾರದಲ್ಲಿ, ಆನ್ಲೈನಿನಲ್ಲಿಯೇ ಆದ್ಯತೆಮೇರೆಗೆ ಜಿಲ್ಲಾವಾರು, ತಾಲೂಕುವಾರು ಮತ್ತು ಗ್ರಾಮಪಂಚಾಯತುವಾರಾಗಿ ಹಂಚಿಕೆಯಾದ Àಗುರಿಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗುವುದು.

 

ಎರಡನೇಹಂತ: 

 1. ಹೀಗೆ ಆಯ್ಕೆಯಾದ ಫಲಾನುಭವಿಗಳಿಗೆ ಮೊಬೈಲ್ಮೂಲಕ ಆಯ್ಕೆ ಯಾಗಿರುವ

ಬಗ್ಗೆ ಸಂದೇಶ ಕಳುಹಿಸಲಾಗುತ್ತದೆ. ಫಲಾನುಭವಿಗಳು ಈಗಾಗಲೇ ತಮಗೆನೀಡಿದ ರಿಜಿಸ್ಟರ್ನಂಬ ರ್ಮೂಲಕ ಲಾಗಿನ್ಆಗಿ ಆನ್ಲೈನಿ ನಿಂದ ಸಾಲದ ದಾಖಲೆಪತ್ರಗಳನ್ನು ಡೌನ್ಲೋಡ್ಮಾಡಿ ಕೊಂಡು, ಭರ್ತಿಮಾಡಿ ಸಹಿಹಾಕಿದ ದಾಖಲೆಪತ್ರಗಳನ್ನು ಸ್ಕಾನ್ಮಾಡಿ ಮತ್ತೆ ಅಪಲೋಡ್ಮಾಡಬೇಕು.

 

 1. ಆನ್ಲೈನಿನಲ್ಲಿ ಅಪಲೋಡ್ಮಾಡಿದನಂತರ, ಸಹಿಹಾಕಿಟ್ಟು ಕೊಂಡ. ಸಾಲ ಮಂಜೂರಾತಿ ಪತ್ರ ಹಾಗೂ ತಗಾದೆ ಪತ್ರ, ಹಿಂದೆ ಸಲ್ಲಿಸಿದ ಸಾಲದ ಅರ್ಜಿ ಮತ್ತು ನೀಡಿರುವ ಕೆವೈಸಿ ದಾಖಲೆಗಳ ಪ್ರತಿಗಳೊಂದಿಗೆ, ಆಯಾ ಜಿಲ್ಲಾವ್ಯವಸ್ಥಾಪಕರ ಕಛೇರಿಯಲ್ಲಿಸಲ್ಲಿಸಬೇಕು.

 

ಮೂರನೇಹಂತ:

 1. ಜಿಲ್ಲಾವಾರು ಆಯ್ಕೆಯಾದ ಫಲಾನುಭವಿಗಳಪಟ್ಟಿಯನ್ನು ಜಿಲ್ಲಾ ಕಛೇರಿಗಳಿಗೆ ಮುಂಚಿತವಾಗಿ ಮೇಲ್ ಮೂಲಕ ಕಳುಹಿಸಲಾಗುವುದು. ತದನಂತರ ಆಯ್ಕೆಯಾದ ಫಲಾನುಭವಿಗಳುಸಲ್ಲಿಸುವ ಅರ್ಜಿ, ಸಹಿಹಾಕಿಟ್ಟುಕೊಂಡ. ಸಾಲ ಮಂಜೂರಾತಿ ಪತ್ರ ಹಾಗೂ ತಗಾದೆಪತ್ರಗಳ ಮೂಲಪ್ರತಿಗಳನ್ನು ಮತ್ತು ಕೆವೈಸಿ ದಾಖಲೆಗಳನ್ನುಆಯಾ ಜಿಲ್ಲಾವ್ಯವಸ್ಥಾಪಕರು ಮೂಲ ದಾಖಲೆಗಳೊಂದಿಗೆ ಪರಿಶೀಲಿಸಿ ಆನ್ಲೈನಿನಲ್ಲೇ ಮಂಜೂರಾತಿಗೆ ಶಿಫಾರಸು ಮಾಡಬೇಕು. ಮತ್ತು ಈ ಎಲ್ಲಾ ದಾಖಲೆಗಳನ್ನು ಜಿಲ್ಲಾಕಛೇರಿಯಲ್ಲಿ ಸುರಕ್ಷಿತವಾಗಿ ಕ್ರಮಬದ್ಧವಾಗಿ ಇಟ್ಟುಕೊಳ್ಳಬೇಕು.

 

 1. (ಅ) ಜಿಲ್ಲಾ ಕಛೇರಿಯಿಂದ ಆನ್ಲೈನಿನಲ್ಲೇ ಮಂಜೂರಾಗಿ ಬಂದಪಟ್ಟಿಗಳ

ಆಧಾರದಲ್ಲಿ ಆಯಾ ದಿನಪಡೆದ ಸಾಲದ ಅರ್ಜಿಗಳನ್ನು ಕೇಂದ್ರ ಕಛೇರಿಯಲ್ಲಿ  ಆಯಾದಿನವೇ ಪಟ್ಟಿ ಮಾಡಿ, ಸಾಲ ಬಿಡುಗಡೆಗೆ ಸಿದ್ಧಗೊಳಿಸುವುದು. ಯಾವ ಕಾರಣಕ್ಕೂಪಟ್ಟಿಯನ್ನು ಕೇಂದ್ರಕಛೇರಿಗೆ ಆನ್ಲೈನಿನಲ್ಲೇ  ಅನುಮೋದಿಸುವಲ್ಲಿ ತಡಮಾಡಕೂಡದು. ಫಲಾನುಭವಿಗಳನ್ನು ಸತಾಯಿಸುವುದಾಗಲ್ಲಿ, ದಾಖಲೆ ಪತ್ರಗಳನ್ನು ತಕ್ಷಣವೆ ಸ್ವೀಕರಿಸಲು ವಿಳಂಬ ಮಾಡುವುದಾಗಲಿ ಕಂಡುಬಂದಲ್ಲಿ ಜಿಲ್ಲಾ ವ್ಯವಸ್ಥಾಪಕರಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

 

(ಆ) ಆಯಾ ಜಿಲ್ಲೆಯಿಂದ ಆಯ್ಕೆಯಾದ ಫಲಾನುಭವಿಗಳಿಂದ ಸಂಗ್ರಹಿಸಿದ ಸಾಲ ಪತ್ರಗಳ ಆಧಾರದಲ್ಲಿ ಎಲ್ಲಾ ಫಲಾನುಭವಿಗಳ ಸಾಲ ಖಾತೆಯನ್ನು ಸಾಲದ ರಿಜಿಸ್ಟರಿನಲ್ಲಿ ತೆರೆಯತಕ್ಕದ್ದು.

 

(ಇ) ಮೈಕ್ರೋ ಸಾಲದ ಮೊರೆಟೋರಿಯಂಅವಧಿ 2 ತಿಂಗಳು ಮಾತ್ರ. ನಂತರ 10

       ಸಮಾನ ಕಂತುಗಳಲ್ಲಿ, ಶೇಕಡ 4ರ ಬಡ್ಡಿಯೊಂದಿಗೆ ಸಾಲವನ್ನು ವಸೂಲಾತಿ

       ಮಾಡತಕ್ಕದ್ದು. (ರೂ.10,000/-ಸಾಲಕ್ಕೆ 10 ತಿಂಗಳ ಮಾಸಿಕ ಕಂತು ರೂ 1,025/-)

         

(ಈ) ಮೇಲೆ ಸೂಚಿಸಿದ ಕ್ರಮಗಳಲ್ಲಿ ಯಾವುದೇ ವ್ಯತ್ಯಯಕಂಡು ಬಂದಲ್ಲಿ ಜಿಲ್ಲಾ

        ವ್ಯವಸ್ಥಾಪಕರೇ ಜವಾಬ್ದಾರರಾಗಿರುತ್ತಾರೆ.

 

7    ಸಾಲ ಅನುಮೋದನೆಯ ನಂತರ ಕೇಂದ್ರ ಕಛೇರಿಯಿಂದ ಕೂಡಲೇಸಾಲದ

     ಮೊತ್ತವನ್ನು ನೆಪ್ಟ್ ಮೂಲಕ ಪ್ರತಿಯೋರ್ವ ಸಾಲಗಾರರ ಖಾತೆಗೆ ಜಮಾ ಮಾಡಬೇಕು.

 

 

 

.


ಇತ್ತೀಚಿನ ನವೀಕರಣ​ : 07-12-2020 02:36 PM
ಅನುಮೋದಕರು: Karnataka Minorities Development Corporation

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 32135
 • ಇತ್ತೀಚಿನ ನವೀಕರಣ : 06-04-2021 03:55 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ