‘ಮನೆ ಮಳಿಗೆ’ ಯೋಜನೆ

ಮನೆ ಮಳಿಗೆ’ ಯೋಜನೆ

 

ಈ ಯೋಜನೆಯನ್ನು ಕೆಳಕಂಡ ಎರಡು ವಿಭಾಗಗಳ ರಾಜ್ಯದ ಅಲ್ಪಸಂಖ್ಯಾತ ವಿಶೇಷ ಹಾಗೂ ದುರ್ಬಲ ವರ್ಗದ ಫಲಾನುಭವಿಗಳಿಗೆ ಇವರ ಆರ್ಥಿಕ ಮಟ್ಟವನ್ನು ಉತ್ತಮಗೊಳಿಸಲು ಹಾಗೂ ಈ ವರ್ಗದವರು ಸ್ವಾಲಂಭಿಗಳಾಗಿ ಬದುಕುವ ನಿಟ್ಟಿನಲ್ಲಿ ಆರ್ಥಿಕ ಸಬಲರಾನ್ನಾಗಿಸಲು ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. (ಸರ್ಕಾರಿ ಆದೇಶ ಸಂಖ್ಯೆ: ಎಂಡಬ್ಲ್ಯೂಡಿ 56 ಎಂಡಿಸಿ 2017 ಬೆಂಗಳೂರು, ದಿನಾಂಕ 02/06/2017

 

(1) ರಾಜ್ಯದಲ್ಲಿ ಕೋಮು ಗಲಭೆ ಮತ್ತು ಕೋಮು ಹಿಂಸಾಚಾರದ ಸಂದರ್ಭದಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮೆನಗಳು ನಾಶ ಅಥವಾ ಹಾನಿಗೊಳಗಾಗಿ ಜೀವನೋಪಾಯವನ್ನು ಸಾಧಿಸಲು ಸಾಧ್ಯವಾಗದ ಅಲ್ಪಸಂಖ್ಯಾತ ಸಮುದಾಯದ ಫಲಾನುಭವಿಗಳಿಗೆ ಪ್ರಾರಂಭಿಸಲು ಸಾಲ ಸೌಲಭ್ಯವನ್ನು ನೀಡಲಾಗುವುದು.

 

          (2) ಸನ್ನಡತೆ ಆಧಾರದ ಮೇಲೆ ಕಾರಾಗೃಹ ವಾಸದಿಂದ ಬಿಡುಗಡೆಯಾದ ಖೈದಿಗಳಿಗೆ, ಭಯೋತ್ಪಾದಕ ವಿರೋಧಿ ಚಟುವಟಿಕೆ, ಗೂಂಡಾ ಕಾಯಿದೆಯಡಿ ಬಂಧಿತರಾಗಿ ಪ್ರಕರಣಗಳು ಸಾಬೀತಾಗದೇ ನ್ಯಾಯಾಲಯದಿಂದ ಬಿಡುಗಡೆಯಾದ ನಿರಪರಾಧಿಗಳಿಗೆ ಹಾಗೂ ವಿವಿಧ ಸುರಕ್ಷತೆ ಕಾಯಿದೆಯಡಿ ಬಂಧಿತರಾಗಿ ಹಲವಾರು ವರ್ಷಗಳ ನಂತರ ನ್ಯಾಯಾಲಯದಿಂದ ಬಿಡುಗಡೆಯಾದ ನಿರಪರಾಧಿಗಳು ಇವರಿಗೆ ಜೀವನೋಪಾಯವನ್ನು ಕಲ್ಪಿಸಲು ಇಂತಹ ಅಲ್ಪಸಂಖ್ಯಾತರ ವರ್ಗದವರನ್ನು ಗುರುತಿಸಿ ಸಾಲ ಸೌಲಭ್ಯವನ್ನು ನೀಡಿ ಇವರ ಜೀವನವನ್ನು ಉತ್ತಮಗೊಳಿಸಲು ಉದ್ದೇಶಿಸಲಾಗಿದೆ.

 

ಸಾಲ ಸೌಲಭ್ಯದ ವಿವರ:

 

ಮೇಲ್ಕಂಡಂತೆ 2 ವರ್ಗಗಳ ರಾಜ್ಯದಲ್ಲಿನ ವಿಶೇಷ/ದುರ್ಬಲವರ್ಗದ ಫಲಾನುಭವಿಗಳಿಗೆ ಗರಿಷ್ಠ 5 ಲಕ್ಷಗಳ ಘಟಕ ವೆಚ್ಚಕ್ಕೆ ಶೇ.50ರಷ್ಟು ಸಹಾಯಧನ ಮತ್ತು 3ರಬಡ್ಡಿದರದಲ್ಲಿ ಶೇ.50ರಷ್ಟು ಸಾಲವನ್ನು ನೀಡಲಾಗುವುದು.

 

 

ಅರ್ಹತೆಗಳು

    

1.ಸರ್ಕಾರಿ ಆದೇಶದಲ್ಲಿ ಸೂಚಿಸಿದಂತೆ ಫಲಾನುಭವಿಯು ಮತೀಯ ಅಲ್ಪಸಂಖ್ಯಾತ  ವರ್ಗಕ್ಕೆ ಸೇರಿರಬೇಕು.

2.ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

3.ವಾರ್ಷಿಕ ಕೌಟುಂಬಿಕ ಆದಾಯ  ರೂ.6.00 ಲಕ್ಷಗಳನ್ನು ಮೀರಿಬಾರದು.

4.ಅರ್ಜಿದಾರರ ವಯಸ್ಸು 18 ರಿಂದ 45 ವರ್ಷಗಳ ಮಿತಿಯಲ್ಲಿರಬೇಕು

5.ಅರ್ಜಿದಾರರ ʼಆಧಾರ್‌‌ʼ ಕಾರ್ಡ್, ಚುನಾವಾಣ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು

6.ಅರ್ಜಿದಾರರ ಅಥವಾ ಆಕೆಯ ಕಂಟುಂಬದ ಸದಸ್ಯರು ಕಳೆದ 05 ವರ್ಷಗಳಲ್ಲಿ ಇದೇ ಮಾದರಿಯ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು

7.ಅರ್ಜಿದಾರರ ಕುಟುಂಬದ ಸದಸ್ಯರು ರಾಜ್ಯ/ಕೇಂದ್ರ ಸರ್ಕಾರದ ಉದ್ಯೋಗಿಯಾಗಿರಬಾರದು .

 

 

 

 

.


ಇತ್ತೀಚಿನ ನವೀಕರಣ​ : 07-12-2020 02:13 PM
ಅನುಮೋದಕರು: Karnataka Minorities Development Corporation

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 32125
 • ಇತ್ತೀಚಿನ ನವೀಕರಣ : 06-04-2021 03:55 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ