‘ಅರಿವು’ (ವಿದ್ಯಾಭ್ಯಾಸ ಸಾಲ) ಯೋಜನೆ

ಅರಿವು ಯೋಜನೆ (ಪರಿಷ್ಕೃತ)

       

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯನ್ನು 2020-21ನೇ ಸಾಲಿನ ಅನ್ವಯವಾಗುವಂತೆ ಹೊಸ (ಪ್ರೆಶ್)‌ ಪ್ರಕರಣಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾದ ವೈದ್ಯಕೀಯ/ವೃತ್ತಿಪರ ಕೋರ್ಸುಗಳ ವಿಧ್ಯಾರ್ಥಿಗಳ ಹೊರತಾಗಿ ಬೇರೆ ಯಾವ ಕೋರ್ಸುಗಳಿಗೂ ಸಾಲವನ್ನು ನೀಡಲಾಗುವುದಿಲ್ಲ. ರಿನ್ಯೂವಲ್‌ ಪ್ರಕರಣಗಳಲ್ಲಿ ಸರ್ಕಾರಿ ಆದೇಶ ಸಂಖ್ಯೆ MWD 310 MDS 2020 ಬೆಂಗಳೂರು ದಿನಾಂಕ 17/08/2020ರನ್ವಯ  ಈ ಕೆಳಕಂಡಂತೆ ಪರಿಷ್ಕರಿಸಿ ಕಾರ್ಯಗತಗೊಳಿಸಲು ಸರ್ಕಾರವು ಆದೇಶಿಸಿರುತ್ತದೆ.

 

ರಿನ್ಯೂವಲ್‌ ಸಾಲವನ್ನು ಪರಿಗಣಿಸುವಾಗ ವಿದ್ಯಾರ್ಥಿಯು ಹಿಂದಿನ ವರ್ಷದ/ಹಿಂದಿನ ಸೆಮಿಸ್ಟರ್‌ ಪರೀಕ್ಷೆಗಳಲ್ಲಿ ಕನಿಷ್ಟ ಶೇ.65ರಷ್ಟು ಅಂಕಗಳನ್ನು ಎಲ್ಲಾ ವಿಷಯಗಳಲ್ಲೂ ತೇರ್ಗಡೆ ಹೊಂದಿರಬೇಕು.  ವಿದ್ಯಾರ್ಥಿಗಳು ಆನ್‌ ಲೈನ್ ನಲ್ಲಿ ರಿನ್ಯೂವಲ್‌ ಅರ್ಜಿಯನ್ನು ಸಲ್ಲಿಸುವಾಗ ನಿಗಮದಿಂದ ಈ ಹಿಂದಿನ ವರ್ಷಗಳಲ್ಲಿ ಪಡೆದಿರುವ ಒಟ್ಟು ಸಾಲದ ಬಾಕಿಯ ಮೊತ್ತದೆ ಶೇ.12 ರಷ್ಟುನ್ನು ಜಿಲ್ಲಾ ಕಛೇರಿಗಳಲ್ಲಿ ಪಾವತಿಸಿರಬೇಕು. 

 

 1. ಸಿ.ಇ.ಟಿ/ನೀಟ್‌ ಇಂದ ಆಯ್ಕೆಯಾದ ವೈದ್ಯಕೀಯ ಪದವಿ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಶೇ.50% ಗರಿಷ್ಟ ರೂ.2.00 ಲಕ್ಷಗಳವರೆಗೆ
 2. ಸಿ.ಇ.ಟಿ/ನೀಟ್‌ ಇಂದ ಅಂದರೆ ಡೆಂಟಲ್‌, ಎಂ.ಬಿಎ ಸರ್ಕಾರಿ ಕೋಟಾದಲ್ಲಿ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದ ಶೇ.50% ಗರಿಷ್ಟ ರೂ.30,000/- (ರಿನ್ಯೂವಲ್‌ ಸಹಿತ)
 3. ಸಿ.ಇ.ಟಿ ಇಂದ ಅಂದರೆ ಇಂಜಿನಿಯರಿಂಗ್‌ ಎಂ.ಟೆಕ್‌, ಎಂ.ಸಿ.ಎ, ಬಿ.ಎಸ್.ಸಿ (ಎ.ಜಿ) ಅಯುರ್ವೇದ, ಐ.ಎಸ್.ಎಂ.ಹೆಚ್.‌, ಡಿ.ಫಾರ್ಮ, ಬಿ.ಫಾರ್ಮ ಮತ್ತು ಇತರೆ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಬೋಧನಾ ಶುಲ್ಕದ ಶೇ.50% ಗರಿಷ್ಟ ರೂ.30,000/-
 4. ಇತರೆ ಡಿಗ್ರಿ, ಡಿಪ್ಲೋಮಾ ಮತ್ತು ಐಟಿಐ ಕೋರ್ಸುಗಳಿಗೆ ಸರ್ಕಾರಿ/ಖಾಸಗಿ ಕಾಲೇಜುಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಹೊಸ (ಪ್ರಶ್)‌ ಪ್ರಕರಣಗಳಿಗೆ ಬೋಧನಾ ಶುಲ್ಕ ಇರುವುದಿಲ್ಲ ರಿನ್ಯೂವಲ್‌ ಪ್ರಕರಣಗಳಿಗೆ ಮಾತ್ರ ರೂ.10,000/- ಗರಿಷ್ಟ.

 

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೆಎಂಡಿಸಿ ವೆಬ್‌ಸೈಟ್ https://kmdc.kar.nic.in/arivu2/ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ

 

 

 

 

.


ಇತ್ತೀಚಿನ ನವೀಕರಣ​ : 07-12-2020 02:11 PM
ಅನುಮೋದಕರು: Karnataka Minorities Development Corporation

ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 32128
 • ಇತ್ತೀಚಿನ ನವೀಕರಣ : 06-04-2021 03:55 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ