ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಕರ್ನಾಟಕ ಸರ್ಕಾರ

Back
‘ಗಂಗಾ ಕಲ್ಯಾಣ' ಯೋಜನೆ

‘ಗಂಗಾ ಕಲ್ಯಾಣ' ಯೋಜನೆ
(2021-22 ನೇ ಸಾಲಿಗೆ ಮಾತ್ರ)

 

ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲಿ ಹರಿಯುವ ನೀರಿನ ವ್ಯವಸ್ಥೆ ಲಭ್ಯವಿರುವುದಿಲ್ಲವೋ ಅಂತಹ ಸ್ಥಳದಲ್ಲಿ ತಜ್ಞ ಭೂವಿಜ್ಞಾನಿಗಳ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ನೆಲದಡಿಯಲ್ಲಿ ಕೊಳವೆಬಾವಿಯನ್ನು ಕೊರೆದು, ನಂತರ ನೀರು ಸಂಗ್ರಹಿಸಲು ಟ್ಯಾಂಕ್‌ನ್ನು ನಿರ್ಮಿಸಿಕೊಟ್ಟು, ಅದಕ್ಕೆ ಅಳವಡಿಸಿದ ಪೈಪ್ ಮೂಲಕ ಕೃಷಿ ಭೂಮಿಗೆ ನೀರನ್ನುಒದಗಿಸಲಾಗುತ್ತದೆ. ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ 01 ಎಕರೆ 20 ಗುಂಟೆಯಿAದ 5 ಎಕರೆ ಭೂಮಿಯನ್ನು ಹೊಂದಿರುವ ಫಲಾನುಭವಿಗೆ ಒಂದು ಕೊಳವೆಬಾವಿ ಕೊರೆಯಿಸಿ ಅದಕ್ಕೆ ನಿಗಮದಿಂದ ಪಂಪ್‌ಸೆಟ್‌ನ್ನು ಅಳವಡಿಸಲಾಗುವುದು. ಪಂಪ್‌ಸೆಟ್ ಮತ್ತು ವಿದ್ಯುದ್ದೀಕರಣ ಸೇರಿ ಒಟ್ಟು ವೆಚ್ಚ ರೂ.1.50 ಲಕ್ಷವಾಗಿದೆ. ಅರ್ಜಿದಾರರು ವೆಬ್ ಪೇಜ್ ಮೂಲಕ ಆನ್-ಲೈನ್ ಅರ್ಜಿಯನ್ನು ಸಲ್ಲಿಸಬೇಕು.

ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಸರ್ಕಾರವು ರೂ.2.00ಲಕ್ಷಗಳನ್ನು ನಿಗದಿಪಡಿಸಿರುತ್ತದೆ. ಈ ಮೊತ್ತದಲ್ಲಿ ಕೊಳವೆ ಬಾವಿಯ ಕೊರೆಯುವಿಕೆ, ಪಂಪ್‌ಸೆಟ್ಸ್ ಸರಬರಾಜು ಮತ್ತು ವಿದ್ಯುದ್ದೀಕರಣದ ಠೇವಣಿ ಮೊತ್ತವನ್ನು ಭರಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ರೂ.2,00,000/-ಗಳು ಸಹಾಯಧನ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗೆ ಸಹಾಯಧನ ರೂ.3.50 ಲಕ್ಷಗಳುವಾಗಿರುತ್ತದೆ. ಇದರಲ್ಲಿ ರೂ. 50,000/- ವಿದ್ಯದ್ದೀಕರಣ ವೆಚ್ಚಕ್ಕೆ ಮೀಸಲು.

ಈ ಸೌಲಭ್ಯ ಪಡೆಯ ಬಯಸುವ ಫಲಾನುಭವಿಗಳು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು ಅಂದರೆ ಪ್ರತಿ ಫಲಾನುಭವಿಗೆ 1 ಎಕರೆ 20ಗುಂಟೆ (1 ಎಕರೆ 50ಸೆಂಟ್ಸ್) ಎಕರೆಯಿಂದು 5 ಎಕರೆಯವರೆಗೆ ಕುಷ್ಕಿ ಜಮೀನಿರಬೇಕು ಮತ್ತು ವ್ಯವಸಾಯ ವೃತ್ತಿಯನ್ನೇ ಅವಲಂಬಿಸಿರಬೇಕು. ಸರ್ಕಾರಿ ಆದೇಶ ಸಂಖ್ಯೆ: ಸಕಇ 168 ಬಿಎಮ್‌ಎಸ್ 2010 ದಿನಾಂಕ 25-07-2011 ರಲ್ಲಿ ಸೂಚಿಸಿರುವಂತೆ ಮಡಿಕೇರಿ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಗರಿಷ್ಠ 1 ಎಕರೆ ಜಮೀನನ್ನು ಹೊಂದಿರತಕ್ಕದ್ದು. ಅಭ್ಯರ್ಥಿಗಳಿಂದ ಸ್ವಯಂ ಲಿಖಿತ ಅರ್ಜಿ 3 ಭಾವಚಿತ್ರ, ವಾರ್ಷಿಕ ಆದಾಯ ಪ್ರಮಾಣ ಪತ್ರ, ಆಧಾರಕಾರ್ಡ್/ಚುನಾವಣ ಗುರುತಿನ ಚೀಟಿ/ರೇಷನ್ ಕಾರ್ಡ್ ನಕಲು, ಪಹಣಿ, ರೆರ್ಕಾರ್ಡ್ ಆಪ್ ರೈಟ್ಸ್ ಪಡೆದು ಆಯ್ಕೆ ಸಮಿತಿಯಲ್ಲಿ ಮಂಡಿಸಿ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಫಲಪೇಕ್ಷಿಗಳನ್ನು ಆಯ್ಕೆ ಮಾಡಲಾಗುವುದು.

ಅರ್ಹತೆ:


ಫಲಾನುಭವಿಯು ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು. ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ವಾರ್ಷಿಕ ಕೌಟುಂಬಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ.81,000/ಗಳು ಹಾಗೂ ನಗರ ಪ್ರದೇಶಗಳಲ್ಲಿ ರೂ.1.03 ಲಕ್ಷಗಳನ್ನು ಮೀರಿಬಾರದು. ಅರ್ಜಿದಾರರು ‘ಆಧಾರ್’ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು ಅರ್ಜಿದಾರರ ವಯಸ್ಸು 18 ರಿಂದ 55 ವರ್ಗಗಳ ಮಿತಿಯಲ್ಲಿರಬೇಕು.


ದಾಖಲಾತಿಗಳು :

  1. ಜಾತಿ ಪ್ರಮಾಣ ಪ್ರತಿ
  2. ಆದಾಯ ಪ್ರಮಾಣ ಪ್ರತಿ
  3. ಆಧಾರ್ ಕಾರ್ಡ್ ಪ್ರತಿ
  4. ಇತ್ತೀಚಿನ ಆರ್.ಟಿ.ಸಿ.
  5. ಪಡಿತರ ಚೀಟಿ
  6. ಚುನಾವಣಾ ಗುರುತಿನ ಚೀಟಿ, ಸಣ್ಣ / ಅತಿ ಸಣ್ಣ ಹಿಡುವಳಿದಾರ ದೃಢೀಕರಣ ಪತ್ರ
  7. ಬ್ಯಾಂಕ್ ಪಾಸ್ ಬುಕ್ ಪ್ರತಿ
  8. ಭೂ ಕಂದಾಯ ಪಾವತಿಸಿದ ರಸೀದಿ
  9. ಸ್ವಯಂ ಘೋಷಣಾ ಪತ್ರ
  10. ಜಾಮೀನುದಾರರ ಸ್ವಯಂ ಘೋಷಣಾ ಪತ್ರ.
×
ABOUT DULT ORGANISATIONAL STRUCTURE PROJECTS