ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಕರ್ನಾಟಕ ಸರ್ಕಾರ

Back
ನಿಗಮದ ಬಗ್ಗೆ

“ಬಡತನದಿಂದ ಸ್ವಾವಲಂಬನೆ ಕಡೆಗೆ”

ನಿಗಮದ ಸ್ಥಾಪನೆ

          ಕರ್ನಾಟಕ ರಾಜ್ಯದ ಮತೀಯ ಅಲ್ಪಸಂಖ್ಯಾತರ ಜನಸಂಖ್ಯೆಯು 2011ರ ಜನಗಣತಿ ಪ್ರಕಾರ ಸುಮಾರು 96,00,475 ಇದ್ದುಈ ಪ್ರಮಾಣವು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.15.92 ಆಗಿರುತ್ತದೆ. ರಾಜ್ಯದಲ್ಲಿ ವಾಸಿಸುತ್ತಿರುವ ಮುಸಲ್ಮಾನರುಕ್ರೈಸ್ತರುಜೈನರುಬೌದ್ಧರುಸಿಖ್ಖರು ಮತ್ತು ಪಾರ್ಸಿ ಜನಾಂಗದವರು ಮತೀಯ ಅಲ್ಪಸಂಖ್ಯಾತರ ವ್ಯಾಪ್ತಿಗೆ ಸೇರಿರುತ್ತಾರೆ.  ಇವರಲ್ಲಿ ಬಹುಪಾಲು ಜನರು ಬಡತನದ ರೇಖೆಯ ಕೆಳಗೆ ಸುತ್ತುತ್ತಿದ್ದುಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯು ಚಿಂತಾಜನಕವಾಗಿದ್ದುಅವರುಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಸರ್ಕಾರವು ಮೊದಲು ಸ್ಥಾಪಿಸಿದ್ದ ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ (ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಎಂದು ಪುನರ್‍ನಾಮಕರಣಗೊಂಡಿದೆ) ವಹಿಸಲಾಗಿತ್ತು.

ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತರಿಗೆ ಸಾಲಸೌಲಭ್ಯವನ್ನು ಒದಗಿಸುತ್ತಿತ್ತು.  ಹೀಗಿದ್ದರೂಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿದ್ದ ಯೋಜನೆಗಳು ಮತೀಯ ಅಲ್ಪಸಂಖ್ಯಾತರ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುತ್ತಿಲ್ಲ ಎಂಬ ಅಂಶವನ್ನು ಗಮನಿಸಿಮತ್ತು ರಾಜ್ಯದ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸುವ ಸಲುವಾಗಿ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಏಕೈಕ ಉದ್ದೇಶದಿಂದ ಆಗಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗ್ಡೆಯವರ ನೇತೃತ್ವದ ಸರ್ಕಾರವು ದಿನಾಂಕ 07.02.1986ರಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಎಂಬ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿತು.

 

ನಿಗಮದ ಉದ್ದೇಶ

          ರಾಜ್ಯದ ಮತೀಯ ಅಲ್ಪಸಂಖ್ಯಾತ ಸಮುದಾಯಗಳ ಕಡುಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಅವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವುದು ಹಾಗೂ ಅವರ ಸಾಮಾಜಿಕಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವುದು ನಿಗಮದ ಮುಖ್ಯ ಉದ್ದೇಶವಾಗಿದೆ.

 

ನಿಗಮದ ರಚನೆ:

      ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ರಾಜ್ಯ ಸರ್ಕಾರ ಸ್ವಾಮ್ಯದ ಉದ್ಯಮವಾಗಿದ್ದು, 1956ರ ಕಂಪೆನಿ ಕಾಯಿದಯನ್ವಯ ಸ್ಥಾಪಿಸಲ್ಪಟ್ಟಿದೆ.ನಿಗಮದ ಅಧಿಕೃತ ಬಂಡವಾಳವು ರೂ.150.00 ಕೋಟಿ ಇರುತ್ತದೆ.ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಿಗಮವು ಕಾರ್ಯನಿರ್ವಹಿಸುತ್ತಿದೆ.ನಿಗಮದ ನೋಂದಾಯಿತ ಕಛೇರಿ ಬೆಂಗಳೂರಿನಲ್ಲಿ ಇದ್ದುಇದರ ಜಿಲ್ಲಾ ಕಛೇರಿಗಳು ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಇರುತ್ತವೆ.ನಿಗಮದ ನಿರ್ದೇಶಕರ ಮಂಡಳಿಯ ಅಧ್ಯಕ್ಷರು ಕಾರ್ಯಕಾರಿ ಮುಖ್ಯಸ್ಥರಾಗಿದ್ದು,  ವ್ಯವಸ್ಥಾಪಕ ನಿರ್ದೇಶಕರುಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ.ಸರ್ಕಾರಪ್ರ್ರಾಯೋಜಿತ ಯೋಜನೆಗಳನ್ನು ನಿಗಮದ ಜಿಲ್ಲಾ ಕಛೇರಿಗಳ ಮೂಲಕ ಅನುಷ್ಠಾನಗೊಳಿಸಿ ಮತೀಯ ಅಲ್ಪಸಂಖ್ಯಾತರ ಸಾಮಾಜಿಕಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವುದು ನಿಗಮದ ಧ್ಯೇಯೋದ್ದೇಶವಾಗಿದೆ.

 

 

 

×
ABOUT DULT ORGANISATIONAL STRUCTURE PROJECTS