.
MENU

ಗೌರವಾನ್ವಿತ

Shri Siddaramaiah

ಶ್ರೀ ಎಚ್. ಡಿ .ಕುಮಾರಸ್ವಾಮಿ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ರಾಜ್ಯ

B. Z. Zameer Ahmed Khan

ಶ್ರೀ ಬಿ. ಜೆಡ್ .ಜಮೀರ್ ಅಹ್ಮದ್ ಖಾನ್
ಮಾನ್ಯ ಆಹಾರ ಮತ್ತು ನಾಗರೀಕ ಪೂರೈಕೆ, ಗ್ರಾಹಕರ ವ್ಯವಹಾರಗಳು,
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವರು ಹಾಗೂ
ಅಧ್ಯಕ್ಷರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

Shri M. A. Gaffoor

ಶ್ರೀ ಎಂ. ಎ. ಗಾಫೂರ್
ಅಧ್ಯಕ್ಷರು,
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ

Shri Islauddin Jalaluddin Gadyal

ಶ್ರೀ ಇಸ್ಲಾದ್ದೀನ್ ಜಲಾಲುದ್ದೀನ್ ಗಡಿಯಾಲ್ (ಕೆ.ಎ.ಎಸ್)
ವ್ಯವಸ್ಥಾಪಕ ನಿರ್ದೇಶಕರು,
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ

View more

ಹೊಸತೇನಿದೆ

What's New ?

news

ಇನ್ನಷ್ಟು ತಿಳಿದುಕೊಳ್ಳಿ

ನಿಗಮದ ಸ್ಥಾಪನೆ

ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತರಿಗೆ ಸಾಲಸೌಲಭ್ಯವನ್ನು ಒದಗಿಸುತ್ತಿತ್ತು. ಹೀಗಿದ್ದರೂ, ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿದ್ದ ಯೋಜನೆಗಳು ಮತೀಯ ಅಲ್ಪಸಂಖ್ಯಾತರ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮವನ್ನು ಬೀರುತ್ತಿಲ್ಲ ಎಂಬ ಅಂಶವನ್ನು ಗಮನಿಸಿ, ಮತ್ತು ರಾಜ್ಯದ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸುವ ಸಲುವಾಗಿ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಏಕೈಕ ಉದ್ದೇಶದಿಂದ ಆಗಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ರಾಮಕೃಷ್ಣ ಹೆಗ್ಡೆಯವರ ನೇತೃತ್ವದ ಸರ್ಕಾರವು ದಿನಾಂಕ 07.02.1986ರಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಎಂಬ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿತು.

ನಿಗಮದ ಯೋಜನೆಗಳು

 • ಸ್ವಯಂ ಉದ್ಯೋಗ ಸಹಾಯಧನ ಯೋಜನೆ
 • ‘ಅರಿವು’ (ವಿದ್ಯಾಭ್ಯಾಸ ಸಾಲ) ಯೋಜನೆ
 • ಗಂಗಾ ಕಲ್ಯಾಣ ಯೋಜನೆ
 • ‘ಶ್ರಮಶಕ್ತಿ’ ಸಾಲ ಯೋಜನೆ
 • ಕೃಷಿ ಭೂಮಿ ಖರೀದಿ ಯೋಜನೆ
 • ಸಣ್ಣ (ಮೈಕ್ರೋ) ಸಾಲ ಮತ್ತು ಸಹಾಯಧನ ಯೋಜನೆn
 • ಕ್ರೈಸ್ತ ಸಮುದಾಯ ವಿಶೇಷ ಅಭಿವೃದ್ದಿ ಯೋಜನೆ
 • ಗೃಹ ನಿವೇಶನ ಖರೀದಿ ಹಾಗೂ ಮನೆ ನಿರ್ಮಾಣ ಸಾಲದ ಮೇಲಿನ
  ಬಡ್ಡಿ ಸಹಾಯಧನ ಯೋಜನೆ
 • ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ದಿ ಮತ್ತು ಹಣಕಾಸು ನಿಗಮದ (ದೆಹಲಿ) ಯೋಜನೆಗಳು
 • ‘ಅರಿವು - 2' New

 

ಸ್ವಯಂ ಉದ್ಯೋಗ ಸಹಾಯಧನ ಯೋಜನೆ
ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾ ವಲಯ, ಕೃಷಿ ಆಧಾರಿತ ಚಟುವಟಿಕೆಗಳು ಮುಂತಾದುವುಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ದಿ ಪಡಿಸಿಕೊಳ್ಳುವ ಸಲುವಾಗಿ ರಾಷ್ಟ್ರೀಕೃತ ಬ್ಯಾಂಕುಗಳ/ಹಣಕಾಸು ಸಂಸ್ಥೆಗಳ ಮೂಲಕ ಆರ್ಥಿಕ ನೆರವನ್ನು ನೀಡಲಾಗುತ್ತದೆ.

 

 

‘ಅರಿವು’ (ವಿದ್ಯಾಭ್ಯಾಸ ಸಾಲ) ಯೋಜನೆ
ಈ ಯೋಜನೆಯಡಿಯಲ್ಲಿ ವೃತ್ತಿಪರ ಶಿಕ್ಷಣ ಅಂದರೆ ಇಂಜನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಸ್ನಾತಕ ಪದವಿ (ಉಡಿಚಿಜuಚಿಣioಟಿ), ಸ್ನಾತಕೋತ್ತರ ಪದವಿ (Posಣ ಉಡಿಚಿಜuಚಿಣioಟಿ), ಡಿಪ್ಲೋಮಾ, ನರ್ಸಿಂಗ್, ಅರೆ-ವೈದ್ಯಕೀಯ (Pಚಿಡಿಚಿ ಒeಜiಛಿಚಿಟ), ಪಿ.ಹೆಚ್.ಡಿ, ನರ್ಸಿಂಗ್, ಬಿ.ಎಡ್, ಬಿಬಿಎಂ, ಬಿ.ಫಾರ್ಮ, ಬಿಸಿಎ, ಡಿ.ಎಡ್, ಎಂ.ಬಿ.ಎ, ಎಂ.ಎಡ್, ಐಟಿಐ ಮುಂತಾದ ಕೋರ್ಸ್ನ್ನು ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವರು ವ್ಯಾಸಂಗ ಪೂರ್ಣಗೊಳಿಸುವವರಿಗೆ ಪ್ರತಿ ವರ್ಷಕ್ಕೆ ರೂ.10,000/-ದಿಂದ 75,000/-ಗಳವರೆಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ.

 

 

ಗಂಗಾ ಕಲ್ಯಾಣ ಯೋಜನೆ
ಈ ಯೋಜನೆಯಡಿಯಲ್ಲಿ ನಿರಂತರವಾಗಿ ಹರಿಯುತ್ತಿರುವ ನೀರನ್ನು (ನದಿ) ಪೈಪ್ಲೈನ್ ಮೂಲಕ ಮೇಲಕ್ಕೆ ಎತ್ತಿ, ಸಣ್ಗಣ ಮತ್ತು ಅತಿ ಸಣ್ಣ ರೈತರ ಕೃಷಿ ಜಮೀನಿಗೆ ಮೊದಲ ಸಲ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲಿ ಹರಿಯುವ ನೀರಿನ ವ್ಯವಸ್ಥೆ ಲಭ್ಯವಿರುವುದಿಲ್ಲವೋ ಅಂತಹ ಸ್ಥಳದಲ್ಲಿ ತಜ್ಞ ಭೂವಿಜ್ಞಾನಿ ಮೂಲಕ ಗುರುತಿಸಲ್ಪಟ್ಟ ಜಲಬಿಂದು ವ್ಯಾಪ್ತಿಯೊಳಗೆ ನೆಲದಡಿಯಲ್ಲಿ ಕೊಳವೆಬಾವಿಯನ್ನು ಕೊರೆದು, ನಂತರ ನೀರು ಸಂಗ್ರಹಿಸಲು ಟ್ಯಾಂಕ್ನ್ನು ನಿರ್ಮಿಸಿಕೊಟ್ಟು, ಅದಕ್ಕೆ ಅಳವಡಿಸಿದ ಪೈಪ್ ಮೂಲಕ ಕೃಷಿ ಭೂಮಿಗೆ ನೀರನ್ನು ಒದಗಿಸಲಾಗುತ್ತದೆ.

 

 

‘ಶ್ರ್ರಮಶಕ್ತಿ’ ಯೋಜನೆ
ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರಿಗೆ ಅವರ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಸಾಲಿಯಾನ ಶೇ.4ರ ಬಡ್ಡಿದರದಲ್ಲಿ ರೂ.50,000/-ದವರೆಗೆ ಸಾಲಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ, ಶೇ.50ರಷ್ಟು ಸಾಲವನ್ನು ಫಲಾನುಭವಿಯು 36 ತಿಂಗಳಿನಲ್ಲಿ ಮರುಪಾವತಿ ಮಾಡಿದಲ್ಲಿ, ಉಳಿದ ಶೇ.50ರಷ್ಟು ಸಾಲವನ್ನು ‘ಬ್ಯಾಕ್ ಎಂಡ್ ಸಹಾಯಧನ’ ಎಂದು ಪರಿಗಣಿಸಲಾಗುತ್ತದೆ.

 

 

ಕೃಷಿ ಭೂಮಿ ಖರೀದಿ ಯೋಜನೆ
ಸದರಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರನ್ನು ಬಿಟ್ಟು ಇನ್ನುಳಿದ ಜಮೀನುದಾರರಿಂದ ಗ್ರಾಮೀನ ಪ್ರದೇಶದ 10 ಕಿ.ಮಿ. ವ್ಯಾಪ್ತಿಯಲ್ಲಿ ನಿಗಮವು ಕೃಷಿ ಭೂಮಿಯನ್ನು ಖರೀದಿಸಿ, ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಭೂಮಿ ರಹಿತ ಅಲ್ಪಸಂಖ್ಯಾತ ಬಡ ಕೃಷಿ ಕಾರ್ಮಿಕರಿಗೆ (ರೈತರಿಗೆ) ಒದಗಿಸುತ್ತದೆ. ಪ್ರತಿ ಫಲಾನುಭವಿಗೆ 02 ಎಕರೆ ಖುಷ್ಕಿ ಅಥವಾ 01 ಎಕರೆ ತರಿ ಭೂಮಿಯನ್ನು ವಿತರಿಸಲಾಗುತ್ತದೆ.

 

 

ಸಣ್ಣ (ಮೈಕ್ರೋ) ಸಾಲ ಹಾಗೂ ಸಹಾಯಧನ ಯೋಜನೆ
ಈ ಯೋಜನೆಯನ್ನು ಅಲ್ಪಸಂಖ್ಯಾತ ಮಹಿಳೆಯರು ರಚಿಸಿಕೊಂಡ ಸ್ವ-ಸಹಾಯ ಗುಂಪಿನ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಅಂತಹ ಸಂಘಟಿತ ಗುಂಪು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ 10 ರಿಂದ 20 ಮಹಿಳಾ ಸದಸ್ಯರನ್ನು ಹೊಂದಿದ್ದು, ಅದರ ಸದಸ್ಯರು ಹಣಕಾಸು ಮಿತವ್ಯಯ ಚಟುವಟಿಕೆಯಲ್ಲಿ (ಣhಡಿiಜಿಣ ಚಿಛಿಣiviಣಥಿ) ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿರಬೇಕು. ಅಂತಹ ಸಂಘದ ಸದಸ್ಯರು ತಮ್ಮಲ್ಲಿ ಇಬ್ಬರನ್ನು ಪ್ರತಿನಿಧಿ-01 ಮತ್ತು ಪ್ರತಿನಿಧಿ-02 ಆಗಿ ಆಯ್ಕೆಮಾಡಿಕೊಂಡಿರಬೇಕು. ಅಂತಹ ಪ್ರತಿನಿಧಿಗಳು ಸ್ವ-ಸಹಾಯ ಗುಂಪಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಬ್ಯಾಂಕಿನಿಂದ ತಮ್ಮನ್ನು ‘ಅಧಿಕೃತ ರುಜುದಾರರು’ ಎಂಬ ಮಾನ್ಯತೆ ಪಡೆದಿರಬೇಕು.

 

 

ಕ್ರೈಸ್ತ ಸಮುದಾಯ ವಿಶೇಷ ಅಭಿವೃದ್ಧಿ ಯೋಜನೆ
ಸರ್ಕಾರವು ರಾಜ್ಯದಲ್ಲಿನ ಕ್ರೈಸ್ತ ಸಮುದಾಯದವರ ವಿಶೇಷ ಅಭಿವೃದ್ದಿಗಾಗಿ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ದಿ ಪರಿಷತ್ನ್ನು ದಿನಾಂಕ: 05.11.2011ರಂದು ರಚಿಸಿರುತ್ತದೆ. ನಿಗಮವು ಕ್ರೈಸ್ತ ಸಮುದಾಯದವರ ಅಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಸಹಾಯಧನ ಯೋಜನೆ, ‘ಅರಿವು’ ಯೋಜನೆ, ‘ಶ್ರಮಶಕ್ತಿ’ ಯೋಜನೆ, ಸಣ್ಣ (ಮೈಕ್ರೋ) ಸಾಲ ಮತ್ತು ಸಹಾಯಧನ ಯೋಜನೆ ಮತ್ತು ಗಂಗಾ ಕಲ್ಯಾಣ ಯೋಜನೆಯನ್ನು ಆಯಾ ಯೋಜನೆಯಲ್ಲಿನ ಮಾರ್ಗಸೂಚಿಯನ್ವಯ ಅನುಷ್ಠಾನಗೊಳಿಸುತ್ತಿದೆ.

 

 

ಗೃಹ ನಿವೇಶನ ಖರೀದಿ ಹಾಗೂ ಮನೆ ನಿರ್ಮಾಣ ಸಾಲದ ಮೇಲಿನ ಬಡ್ಡಿ ಸಹಾಯಧನ ಯೋಜನೆ
ಸದರಿ ಯೋಜನೆಯಡಿ ಕ್ರೈಸ್ತ ಸಮುದಾಯದ ಫಲಾನುಭವಿಗಳು ಗೃಹ ನಿರ್ಮಾಣಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್ಗಳು/ಹಣಕಾಸು ಸಂಸ್ಥೆಗಳಿಂದ ರೂ.5.00 ಲಕ್ಷದವರೆಗೆ ಪಡೆದ ಸಾಲಕ್ಕೆ, ಗರಿಷ್ಠ ರೂ.1.00 ಲಕ್ಷದವರೆಗಿನ ಬಡ್ಡಿ ಸಹಾಯಧನವನ್ನು ನಿಗಮದಿಂದ ನೀಡಲಾಗುತ್ತದೆ.

 

 

ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಎನ್.ಎಂ.ಡಿ.ಎಫ್.ಸಿ) ಯೋಜನೆಗಳು
ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮವು (ದೆಹಲಿ) ದಿನಾಂಕ 30.09.1994ರಲ್ಲಿ ಸ್ಥಾಪಿತಗೊಂಡಿದ್ದು, ಮತೀಯ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಕಡುಬಡವರ ಆರ್ಥಿಕಾಭಿವೃದ್ಧಿಯನ್ನು ಗುರಿಯಾಗಿರಿಸಿಕೊಂಡು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ರಾಜ್ಯ ವಿತರಣಾ ಸಂಸ್ಥೆಗಳ (ಎಸ್.ಸಿ.ಎ) ಮೂಲಕ ವಿವಿಧ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

 

 

‘ಅರಿವು - 2' New
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರತಿ ವರ್ಷ ಮಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿ.ಇ.ಟಿ) ಹಾಜರಾಗಿ ರ್ಯಾಂಕಿಂಗ್ ಪಡೆದು ವೃತ್ತಿಪರ ಕೋರ್ಸ್ಗಳಿಗೆ ಸೀಟ್ ಆಯ್ಕೆ ಮಾಡಿಕೊಳ್ಳುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರವು ನಿಗದಿಪಡಿಸಿದ ಬೋಧನಾ ಶುಲ್ಕದ ಸಾಲವನ್ನು ನಿಗಮವು ಮುಂಚಿತವಾಗಿ ಮಂಜೂರು ಮಾಡುತ್ತದೆ.

 

ಸುದ್ದಿ

ಹೆಚ್ಚು ಸುದ್ದಿ